Breaking Posts

6/trending/recent
Type Here to Get Search Results !

8:10:45

ಡಿಸೆಂಬರ್ 4 ರಂದು "ಮ್ಯಾರೇಜ್ ಪಾರ್ಟಿ" ಸಿನಿಮಾ ತೆರೆಗೆ.

ಡಿಸೆಂಬರ್ 4 ರಂದು "ಮ್ಯಾರೇಜ್ ಪಾರ್ಟಿ" ಸಿನಿಮಾ ತೆರೆಗೆ.
ಮಂಗಳೂರು: ಶ್ರೀ ವಾರಾಹಿ ಫಿಲ್ಮ್ಸ್ ಲಾಂಛನದಲ್ಲಿ ತಯಾರಾದ ಸಂತೋಷ್ ವಿ ನಿರ್ಮಾಣದ ಚಯನ್ ಶೆಟ್ಟಿ ನಿರ್ದೇಶನದ "ಮ್ಯಾರೇಜ್ ಪಾರ್ಟಿ" ಸಿನಿಮಾ ಡಿಸೆಂಬರ್ 4 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ದೇಶಕ‌ ಚಯನ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮ್ಯಾರೇಜ್ ಪಾರ್ಟಿ ಸಿನಿಮಾ ಸಂಪೂರ್ಣ ಹಾಸ್ಯ ಸಿನಿಮಾ. ಕರಾವಳಿ ಭಾಗದ ಕಲಾವಿದರನ್ನು ಸೇರಿಸಿ ಸಿನಿಮಾ ತಯಾರಾಗಿದೆ ಎಂದರು.
ನವೀನ್ ಪಡೀಲ್ ಮಾತನಾಡಿ ಸಿನಿಮಾದ ಟೀಸರ್, ಹಾಡು ಪ್ರೇಕ್ಷಕರ ಮೇಲೆ ಪರಿಣಾಮ ಬೀರಿದೆ. ಸಿನಿಮಾದಲ್ಲಿ ಹಾರರ್, ಹಾಸ್ಯ ಎಲ್ಲವೂ ಇದೆ. ಪ್ರೇಕ್ಷಕರು ಕಲಾವಿದರನ್ನು ಬೆಳೆಸಿದಾಗ ನಾವು ಉಳಿಯುತ್ತೇವೆ ಎಂದರು.
ನಿರ್ಮಾಪಕ ಸಂತೋಷ್ ವಿ ಮಾತನಾಡಿ ಚಯನ್ ಶೆಟ್ಟಿ ಅವರ ನಿರ್ದೇಶನದಲ್ಲಿ ಒಂದು ಒಳ್ಳೆಯ ಸಿನಿಮಾ ನೀಡಬೇಕೆಂಬ ಕನಸು ಹೊತ್ತಿದ್ದರು. ಅದು ಮ್ಯಾರೇಜ್ ಪಾರ್ಟಿಯ ಮೂಲಕ ನನಸಾಗಿದೆ. ಸಿನಿಮಾದಲ್ಲಿ ಒಳ್ಳೆಯ ಕಂಟೆಂಟ್ ಇದೆ. ಜೊತೆಗೆ ಸಿನಿಮಾ ಚಿತ್ರೀಕರಣದ ವೇಳೆ ಕಲಾವಿದರ ಪ್ರೋತ್ಸಾಹವೂ ದೊರೆಯಿತು ಎಂದರು.
ನಾಯಕ ನಟ ವಿನೀತ್ ಕುಮಾರ್ ಮಾತನಾಡಿ ಸಿನಿಮಾ ಕರಾವಳಿ ಭಾಗದ ಕತೆಯನ್ನು ಒಳಗೊಂಡಿದ್ದು ಸಿನಿಮಾವನ್ನು ಸಂಪೂರ್ಣವಾಗಿ ಕುಸೇಲ್ದರಸೆ ನವೀನ್ ಡಿ ಪಡೀಲ್ ಆವರಿಸಿಕೊಂಡಿದ್ದಾರೆ. ಕಾಡಿನ ಮಧ್ಯೆ ಚಿತ್ರೀಕರಣ ನಡೆದಿದೆ. ಸಿನಿನಾ ಚೆನ್ನಾಗಿ ಮೂಡಿ ಬಂದಿದೆ ಎಂದರು. 
"ಮ್ಯಾರೇಜ್ ಪಾರ್ಟಿ" ಚಿತ್ರ ಇತ್ತೀಚಿಗೆ ಟ್ರೈಲರ್ ರಿಲೀಸ್ ಆಗಿದ್ದು ಚಿತ್ರ ಪ್ರೇಮಿಗಳ ಕಡೆಯಿಂದ ಒಳ್ಳೆಯ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದ್ದು ಡಿಸೆಂಬರ್ 4 ರಂದು ಕನ್ನಡ ಭಾಷೆಯಲ್ಲಿ ತೆರೆಗೆ ಬರಲಿದೆ. ಹಾಗೂ ಎರಡು ವಾರದ ನಂತರ ಮಲಯಾಳಂ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ, ವಿನೀತ್ ಕುಮಾರ್, ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾನಾಜೆ, ಪುಷ್ಪರಾಜ್ ಬೋಳಾರ್, ಜ್ಯೋತಿಶ್ ಶೆಟ್ಟಿ, ಅನನ್ಯ ಹಾಗೂ ರಕ್ಷಿತಾ ಪೂಜಾರಿ ಸೇರಿದಂತೆ ಕರಾವಳಿ ಭಾಗದ ದೊಡ್ಡ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
 ಇದು ಕಾಮಿಡಿ ಹ್ವಾರಾರ್ ಚಿತ್ರ ವಾಗಿದ್ದು ಈಗಾಗಲೇ ಗಲಾಟೆ ಹಾಗೂ ಅಂದಾಗತಿಯೇ ಸಾಂಗ್ ರಿಲೀಸ್ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡ್ ಆಗ್ತಾ ಇದ್ದು ಚಿತ್ರ ಮಂದಿರದಲ್ಲಿ ಹೊಟ್ಟೆ ಹುಣ್ಣುಗುವಷ್ಟು ನಗಬಹುದು, ಹಿಂದೆ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಯವರಿಗೆ ಆಕ್ಷನ್ ಕಟ್ ಹೇಳಿದ್ದ ಚಯನ್ ಶೆಟ್ಟಿ ಯಾವರು ಮ್ಯಾರೇಜ್ ಪಾರ್ಟಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ, ಶ್ರೀ ವಾರಾಹಿ ಫಿಲಂ ಅಡಿಯಲ್ಲಿ ಉದ್ಯಮಿ ಸಂತೋಷ್ ವಿ ಯವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ ಈ ಚಿತ್ರಕ್ಕೆ ಸು ಫ್ರಮ್ ಸೊ ಖ್ಯಾತಿಯ ನಿತೀನ್ ಶೆಟ್ಟಿ ಸಂಕಲನ, ಶ್ರೀಕಾಂತ್ ಕ್ಯಾಮೆರಾ ವರ್ಕ್, ಹಾಗೂ ರಿತ್ವಿಕ್ ಮುರಳೀಧರ ಸಂಗೀತ ಇದೆ, ಪ್ರಮೋದ್ ಮರವಂತೆ ಹಾಗೂ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಇದೆ ಈ ಸಿನಿಮಾ ವನ್ನು ಎಂಪಿ ಫಿಲಂಸ್ ಮೂಲಕ ಮುನಿದ್ರಾ ಅವರು ವಿತರಣೆ ಮಾಡಲಿದ್ದಾರೆ ಎಂದು ನಿರ್ದೇಶಕ ಚಯನ್ ಶೆಟ್ಟಿ ತಿಳಿಸಿದರು. ಮ್ಯಾರೇಜ್ ಪಾರ್ಟಿ ಸಿನಿಮಾದ ಪ್ರೀಮಿಯರ್ ಶೋ ಮಂಗಳೂರಿನಲ್ಲಿ ನವಂಬರ್ 29 ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿಷ್ ಶೆಟ್ಟಿ, ಕಾರ್ತಿಕ್ ರಾವ್, ಅನನ್ಯ, ರಕ್ಚಿತಾ ಪೂಜಾರಿ, ಭೀಮರಾವ್, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.