Breaking Posts

6/trending/recent
Type Here to Get Search Results !

8:10:45

ಮಕ್ಕಳ ದಿನಾಚರಣೆಯ ಅಂಗವಾಗಿ ಚಿಣ್ಣರ ಚಿಲಿಪಿಲಿ ಶಿಬಿರ.

ಮಕ್ಕಳ ದಿನಾಚರಣೆಯ ಅಂಗವಾಗಿ ಚಿಣ್ಣರ ಚಿಲಿಪಿಲಿ ಶಿಬಿರ.

ಪೈವಳಿಕೆಯಲ್ಲಿ ವೈವಿಧ್ಯಮಯ ಚಿಣ್ಣರ ಕಲರವಕ್ಕೆ ವೇದಿಕೆ.
ಪೈವಳಿಕೆ :ಕುಟುಂಬಶ್ರೀ ಜಿಲ್ಲಾ ಮಿಷನ್ ನ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಚಿಣ್ಣರ ಚಿಲಿಪಿಲಿ ಒಂದು ದಿನದ ಶಿಬಿರವು ಪೈವಳಿಕೆ ಕುಟುಂಬಶ್ರೀ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕೊರ್ಡಿನೆಟರ್ ಶೋಭಿತಾ ಪುಲ್ಕೂರು ನೆರವೇರಿಸಿ, "ಶಿಬಿರಗಳು ಸೃಜನಶೀಲತೆಯನ್ನು ಹೆಚ್ಚಿಸುವುದರೊಂದಿಗೆ ಸಂಘಟಿತ ಮನೋಭಾವನೆಯನ್ನು ಬೆಳೆಸುತ್ತದೆ " ಎಂದು ತಿಳಿಸಿದರು.

ಪ್ರಸಿದ್ಧ ರಂಗ ನಿರ್ದೇಶಕರಾದ ಉದಯ್ ಸಾರಂಗ್ ಹಾಗೂ ರಂಗಕರ್ಮಿ ಅಶೋಕ್ ಕೊಡ್ಲಮೊಗರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಅಭಿನಯ ಹಾಗೂ ಮನೋವೈಜ್ಞಾನಿಕ ಕೌಶಲ್ಯ ಆಟ ಮತ್ತು ನಾಯಕತ್ವ ಗುಣ ಹೆಚ್ಚಿಸುವ ವಿವಿಧ ಚಟುವಟಿಕೆಗಳನ್ನು ಮಾಡಿದರು. 

ಶಿಬಿರದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಂದ ಶಿಬಿರಾರ್ಥಿಗಳು ಭಾಗವಹಿಸಿ ಶಿಬಿರಕ್ಕೆ ಮೆರುಗು ನೀಡಿದರು.ಶಿಬಿರದ ನೇತೃತ್ವವನ್ನು ಪವಿತ್ರ, ಗೀತಾ, ಮಂಜು, ಲವೀನಾ, ಕುಸುಮ, ಬಾಗಿ,ವನಜ, ಸೌಮ್ಯಾ ವಹಿಸಿದರು. ಅನಿತಾ ಸ್ವಾಗತಿಸಿ,ಸೌಮ್ಯ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.