Breaking Posts

6/trending/recent
Type Here to Get Search Results !

8:10:45

ಎಐವೈಎಫ್ ಮಂಜೇಶ್ವರ ಮೇಘಲ ಸಮ್ಮೇಳನ.

ಎಐವೈಎಫ್ ಮಂಜೇಶ್ವರ ಮೇಘಲ ಸಮ್ಮೇಳನ.
ಮಂಜೇಶ್ವರ: ಮಾಜಿ ಸಚಿವ ಮತ್ತು ಹಿರಿಯ ಸಿಪಿಐ ನಾಯಕ ಡಾ. ಎ. ಸುಬ್ಬರಾವ್ ಅವರ ನಿವಾಸದಲ್ಲಿ ಎಐವೈಎಫ್ ಮಂಜೇಶ್ವರ ಮೇಘಲ ಸಮ್ಮೇಳನ ನಡೆಯಿತು. ಎಐವೈಎಫ್ ಕಾಸರಗೋಡು ಜಿಲ್ಲಾಧ್ಯಕ್ಷ ಅಜಿತ್ ಎಂ.ಸಿ ಉದ್ಘಾಟಿಸಿದರು. ಮೇಘಲ ಅಧ್ಯಕ್ಷ ಶನೀಶ್ ಧ್ವಜಾರೋಹಣ ಮಾಡಿದರು. ಮೇಘಲ ಕಾರ್ಯದರ್ಶಿ ಪ್ರಥಮ್ ವರದಿ ಮಂಡಿಸಿದರು. ಮಂಡಲ ಕಾರ್ಯದರ್ಶಿ ದಯಾಕರ್ ಮಾಡ, ಅಧ್ಯಕ್ಷ ಶರತ್ ಬೆಜ್ಜ, ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಜಿಲ್ಲಾ ಸಮಿತಿ ಸದಸ್ಯ ಎಸ್. ರಾಮಚಂದ್ರ ಬಡಾಜೆ, ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ಮೊದಲಾದವರು ಮಾತನಾಡಿದರು. ಅಮಿತ್ ರಾಜ್ ಸ್ವಾಗತಿಸಿ ಮತ್ತು ಧನು ರಾಜ್ ಕೀರ್ತೇಶ್ವರ ವಂದಿಸಿದರು. ಪದಾಧಿಕಾರಿಗಳು: ಪ್ರಥಮ್ ಕಣ್ವತೀರ್ಥ (ಕಾರ್ಯದರ್ಶಿ), ಧನು ರಾಜ್ ಕೀರ್ತೇಶ್ವರ (ಜೊತೆ ಕಾರ್ಯದರ್ಶಿ)
ಶನೀಶ್ (ಅಧ್ಯಕ್ಷರು) ಅಮಿತ್ ರಾಜ್ (ಉಪಾಧ್ಯಕ್ಷರು) ಆಯ್ಕೆಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.