Breaking Posts

6/trending/recent
Type Here to Get Search Results !

8:10:45

ಬೇಳ ಸೊಸೈಟಿ ಮಹಾಸಭೆ : ಸೇವಾ ಗರಿಮೆಗೆ ಮಾಜಿ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಸನ್ಮಾನ.

ಬೇಳ ಸೊಸೈಟಿ ಮಹಾಸಭೆ : ಸೇವಾ ಗರಿಮೆಗೆ ಮಾಜಿ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಸನ್ಮಾನ. 

ಕುಂಬಳೆ: ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಕುಂಬಳೆ ಕಚೇರಿಯಲ್ಲಿ ಅಧ್ಯಕ್ಷರಾದ ನ್ಯಾಯವಾದಿ ಥೋಮಸ್ ಡಿ' ಸೋಜಾ ಅವರ ಅಧ್ಯಕ್ಷತೆಯಲ್ಲಿ ಜರಗಿತು. 
       ಕಾಸರಗೋಡು ಕೆಥೋಲಿಕ್ ವಲಯದ ಪ್ರಧಾನ ಧರ್ಮಗುರುಗಳಾದ ವಂದನೀಯ ಹೆರಾಲ್ಡ್ ಮಸ್ಕರೇನಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ 
ಸಂಘದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ ಸಂಘದ ನಿಕಟಪೂರ್ವ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಹಾಗೂ ಮಾಜಿ ಉಪಾಧ್ಯಕ್ಷ ರಾಜು ಸ್ಟೀಫನ್ ಡಿ"ಸೋಜಾ ಅವರನ್ನು ಹೃದ್ಯವಾಗಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಜಾಸ್ಮಿನ್ ಡಿ'ಸೋಜಾ, ನಿರ್ದೇಶಕ ಸ್ಟೇನಿ ಲೋಬೊ ಮೊದಲಾದವರು ಮಾತನಾಡಿದರು. ಉಪಾಧ್ಯಕ್ಷ ರಿಚಾರ್ಡ್ ಕ್ರೇಸ್ತಾ ಸ್ವಾಗತಿಸಿ, ಥೋಮಸ್ ಡಿ ಸೋಜಾ ವಂದಿಸಿದರು. ಜಯಶ್ರೀ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.