ಮಂಜೇಶ್ವರ: ಕುವೈಟ್‌ನ ಉದ್ಯೋಗ ಸ್ಥಳದಲ್ಲಿ ಅದಿತ್ಯವಾರದಂದು ರಾತ್ರಿ ಹೃದಯಾಘಾತಗೊಂಡು ನಿಧನರಾದ ಮಂಜೇಶ್ವರದ ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಕೊಡುಗೈದಾನಿ, ತೆರೆಯ ಮೆರೆಯಲ್ಲಿ "ವೆಲ್ ವಿಶರ್ ಕುವೈಟ್" ಹೆಸರಿನಲ್ಲಿ ಸಹಾಯ - ಸಹಕಾರವನ್ನು ನೀಡುತ್ತಿರುವ ಹೊಸಂಗಡಿ ಬಳಿಯ ಕಟ್ಟೆ ಬಜಾರ್ ನಿವಾಸಿ, ಧಾರ್ಮಿಕ ಮುಂದಾಳು ಹೇಮೇಶ್ ಬಿ. ಎಂ - ಶ್ರೀಮತಿ ವೀಣಾ ದಂಪತಿಗಳ ಸುಪುತ್ರ ಕಿರಣ್ ರಾಜ್ ರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನವು ಇಂದು ಬೆಳಗ್ಗೆ ತಮ್ಮ ಉದ್ಯೋಗ ಸಂಸ್ಥೆಯ ವಾಸಸ್ಥಳದಲ್ಲಿ ಅತ್ಯಂತ ಭಾವಪೂರ್ಣವಾಗಿ ನೆರವೇರಿತು.
ಕುವೈಟ್‌ನಲ್ಲಿರುವ ಉದ್ಯೋಗ ಸ್ಥಂಸ್ಥೆಯ ಆಡಳಿತ ಮಂಡಳಿ, ಸಹುದ್ಯೋಗಿಗಳು, ಕುವೈಟ್ ನ ಬಿಲ್ಲವ ಸಂಘದ ಪದಾಧಿಕಾರಿಗಳು, ಅನಿವಾಸಿ ಭಾರತೀಯರು, ಸ್ನೇಹಿತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಗಲಿದ ಚೇತನಕ್ಕೆ ಕಂಬನಿಯ ವಿದಾಯ ಸಲ್ಲಿಸಿದರು.
ಕುವೈಟ್‌ನಲ್ಲಿರುವ ಉದ್ಯೋಗ ಸ್ಥಂಸ್ಥೆಯ ಆಡಳಿತ ಮಂಡಳಿ, ಸಹುದ್ಯೋಗಿಗಳು, ಕುವೈಟ್ ನ ಬಿಲ್ಲವ ಸಂಘದ ಪದಾಧಿಕಾರಿಗಳು, ಅನಿವಾಸಿ ಭಾರತೀಯರು, ಸ್ನೇಹಿತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಗಲಿದ ಚೇತನಕ್ಕೆ ಕಂಬನಿಯ ವಿದಾಯ ಸಲ್ಲಿಸಿದರು.
ಕುವೈಟ್‌ನಲ್ಲಿನ ಎಲ್ಲಾ ಕಾನೂನು ಮತ್ತು ದಾಖಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮೃತದೇಹವನ್ನು ಇಂದು ವಿಮಾನದ ಮೂಲಕ ತಾಯ್ನಾಡಿಗೆ ರವಾನಿಸಲಾಗುತ್ತಿದೆ. ರಾತ್ರಿ 10.30 ಕ್ಕೆ ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ತೊಕ್ಕೊಟ್ಟು ಬಳಿಯ ಕೊಲ್ಯದಲ್ಲಿರುವ ಶೈತ್ಯಾಗಾರಕ್ಕೆ ತಂದಿರಿಸಲಾಗುವುದು. ಬಳಿಕ ನಾಳೆ ಬೆಳಿಗ್ಗೆ 8.30 ಕ್ಕೆ ಕಿರಣ್ ರ ಸ್ವ - ಗೃಹ ಹೊಸಂಗಡಿ ಬಳಿಯ ಕಟ್ಟೆ ಬಜಾರ್ ಗೆ ತಲುಪಲಿದೆ. ಬಳಿಕ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿದೆ. ಸಾರ್ವಜನಿಕ ದರ್ಶನದ ಬಳಿಕ ರಾಮತ್ತಮಜಾಲ್ ನ ಸಾರ್ವಜನಿಕ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಿಕೊಡುವಲ್ಲಿ ಕುವೈಟ್‌ನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಬಿಲ್ಲವ ಸಂಘಟನೆಯ ಪದಾಧಿಕಾರಿಗಳು, ಭಾರತೀಯ ಪ್ರವಾಸಿ ಪರಿಷತ್ ನ ಮಾಜಿ ಅಧ್ಯಕ್ಷರಾದ ರಾಜ್ ಭಂಡಾರಿ, ಉದ್ಯೋಗ ಸಂಸ್ಥೆಯವರು, ಕುಟುಂಬದ ಪ್ರಮುಖರು, ಸಾಮಾಜಿಕ ಕಾರ್ಯಕರ್ತರು ವಿಶೇಷ ಮುತುವರ್ಜಿ ವಹಿಸಿ ಸಹಕರಿಸಿದ್ದಾರೆ.