ಮಂಜೇಶ್ವರ: ಕಟ್ಟೆ ಬಜಾರ್ ತಿರುವಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ, ಎದುರು ನಿಂತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬಳಿಕ ಹಳೆಯ ಕಾಲದ ಕಟ್ಟಡಕ್ಕೆ ನುಗ್ಗಿ, ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಟೈಲರ್ ಅಂಗಡಿಗೆ ನುಗ್ಗಿದ ಘಟನೆ ಇದೀಗ ನಡೆದಿದೆ. ಹೊಸಂಗಡಿಯಿಂದ ಮಂಜೇಶ್ವರ ಭಾಗಕ್ಕೆ ತೆರಳುತ್ತಿದ್ದ ಕಾರಿನ ಒಳಗೆ ಇಲಿಯೊಂದು ಚಾಲಕನ ಕಾಲಿನ ಬಳಿ ಬಂದಾಗ ಕಸಿವಿಸಿಗೊಂಡು ನಿಯಂತ್ರಣ ತಪ್ಪಿ ಹಳೆಯ ಕಟ್ಟಡ ಮುಂಭಾಗದಲ್ಲಿ ದ್ವಿಚಕ್ರ ವಾಹನ ಸವಾರನ ಗಾಡಿಗೆ ಡಿಕ್ಕಿ ಹೊಡೆದು ಬಳಿಕ ಕಟ್ಟದಲ್ಲಿರುವ ಟೈಲರ್ ಅಂಗಡಿಗೆ ನುಗ್ಗಿದೆ. ಸ್ಕೂಟರ್ ಸವಾರ ಗಾಡಿ ನಿಲ್ಲಿಸಿ ಫೋನ್ ನಲ್ಲಿ ಮಾತನಾಡುವ ವೇಳೆ ಅಪಘಾತ ಸಂಭವಿಸಿದ್ದು, ಈ ವೇಳೆ ಈತ ಗಾಡಿ ಬಿಟ್ಟು ದೂರ ಸರಿದುದರಿಂದ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯಲ್ಲಿ ಹಳೆಯ ಕಟ್ಟಡಕ್ಕೆ ಹಾಗೂ ಕಾರಿಗೆ ಹಾನಿಯುಂಟಾಗಿದೆ.
8:10:45