ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಗೆ ನುಗ್ಗಿದ ಕಳ್ಳ ಕಾಣಿಕೆ ಡಬ್ಬಿಯಿಂದ ಕಳವು ನಡೆದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಇಂದು ಶನಿವಾರವಾದುದರಿಂದ ಸಂಜೆ ನಡೆಯುವ ಪೂಜೆಯ ಸಿದ್ಧತೆಗಾಗಿ ವ್ಯಾಯಾಮ ಪದಾಧಿಕಾರಿಯೋರ್ವರು ಬೆಳಗ್ಗೆ 5 ಗಂಟೆಗೆ ವ್ಯಾಯಾಮ ಶಾಲೆಗೆ ಬಂದಾಗ ಕಳವು ನಡೆದ ಬಗ್ಗೆ ಅರಿವಾಗಿದೆ. ಬಾಗಿಲಿನ ಬೀಗವನ್ನು ರಾಡ್ ಬಳಸಿ ಮುರಿದು ಒಳ ನುಗ್ಗಿದ ಕಳ್ಳ ದೇವರ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಮುರಿದು ಅದರಲ್ಲಿದ್ದ ಹಣವನ್ನು ದೋಚಿ ಬಳಿಕ ಡಬ್ಬಿಯನ್ನು ವ್ಯಾಯಾಮ ಶಾಲೆಯ ಮುಂಭಾಗದ ಪೊದೆಯಲ್ಲಿ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ವ್ಯಾಯಮ ಶಾಲೆಯ ಅಧ್ಯಕ್ಷರಾದ ಸದಾನಂದ ಹತ್ತನೇ ಮೈಲು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯ ಸಿ.ಸಿ ಟಿವಿ ಯ ದೃಶ್ಯಗಳನ್ನು ಆದರಿಸಿ ತನಿಖೆ ನಡೆಸುತ್ತಿದ್ದು, ಸಿ.ಸಿ ಟಿವಿ ಯ. ದೃಶ್ಯದಲ್ಲಿ ಓರ್ವ ವ್ಯಕ್ತಿ ನೇರ ಬಂದು ಬಾಗಿಲು ಮುರಿದು ಕಳವು ನಡೆಸಿ ತೆರಳುವ ದೃಶ್ಯವು ಲಭಿಸಿದ್ದು, ಈ ದೃಶ್ಯವನ್ನು ಆಧರಿಸಿ ಕಳ್ಳನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
8:10:45