ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ನ ಎಕೆಎಂ ಅಶ್ರಫ್ 29,332 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆಂದು ಚುನಾವಣಾ ಆಯೋಗ ಘೋಷಿಸಿದೆ. ಇದು ಮಂಜೇಶ್ವರ ಮಂಡಲದ ಐತಿಹಾಸಿಕ ಮತ್ತು ಚಾರಿತ್ರಿಕ ಅಂತರದ ಗೆಲುವಾಗಿದೆ. ಈ ಹಿಂದೆ ಕೇವಲ ಮತಗಳ ಅಂತರದಲ್ಲಿ ಯುಡಿಎಫ್ ಗೆಲುವು ಕಂಡಿದ್ದ ಮಂಜೇಶ್ವರದಲ್ಲಿ ಪ್ರಬಲ ಪ್ರತಿಸ್ಪರ್ಧಿ ಬಿಜೆಪಿಯನ್ನು 30 ಸಾವಿರದಷ್ಟು ಮತಗಳ ಅಂತರದಲ್ಲಿ ಪರಾಜಯಗೊಳಿಸುವ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಬಹುಮತ ಪಡೆದ ಸಾಧನೆ ಎಕೆಎಂ ಅಶ್ರಫ್ ಅವರದ್ದಾಗಿದೆ. ಇದೇ ವೇಳೆ ಈ ವರೆಗೆ ಸಿಪಿಐಎಂ ನ ಪಾಲಿಗೆ ಸೋಲರಿಯದ ಕ್ಷೇತ್ರವಾಗಿದ್ದ ತ್ರಿಕರಿಪುರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದು ಸ್ಪರ್ಧಿಸಿದ ಸಂದೀಪ್ ವಾರ್ಯರ್ ಅಚ್ಚರಿಯ ಗೆಲುವು ಗಳಿಸಿದ್ದಾರೆ.
8:10:45