ಕುಂಬಳೆ: ಸೀನಿಯರ್ ಟೀಚರ್ಸ್ ಆಯೋಜಿಸಿದ “ಸೀನಿಯರ್ ಟೀಚರ್ಸ್ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟವು ಇತ್ತೀಚೆಗೆ ಕುಂಬಳೆ ಶೇಡಿಕಾವು ಮೈದಾನದಲ್ಲಿ ನಡೆಯಿತು.
ಪಂದ್ಯಾವಳಿಯನ್ನು ಉದ್ಘಾಟಿಸಿದ ನಿವೃತ್ತ ದೈಹಿಕ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ಮಾತನಾಡಿ, “ದೈಹಿಕ ಆರೋಗ್ಯವನ್ನು ವೃದ್ಧಿಸುವ ಈ ಶಿಕ್ಷಕರ ಪಂದ್ಯಾಟವು ಪ್ರಶಂಸನೀಯವಾಗಿದೆ. ಕ್ರಿಯಾತ್ಮಕ ಕಲಿಕೆಯ ಜೊತೆಗೆ ಮಕ್ಕಳೊಂದಿಗೆ ಬೆರೆತು ಕಾರ್ಯನಿರ್ವಹಿಸುವ ಅಧ್ಯಾಪಕರು ಒಟ್ಟಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಪೂರಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮವು ಕ್ರೀಡಾಕೂಟ ಸಂಘಟಕರಾದ ಅಶೋಕ್ ಮಾಸ್ತರ್ ಕೊಡ್ಲಮೊಗರು ಅವರ ಅಧ್ಯಕ್ಷತೆಯಲ್ಲಿ ಜರುಗಿತು. ತೀರ್ಪುಗಾರರಾದ ಕೋಟಿ ಪೂಜಾರಿ, ನಿವೃತ್ತ ಶಿಕ್ಷಕ ಮಹಾಲಿಂಗೇಶ್ವರ ಎನ್, ದಿನೇಶ್ ಮಾಸ್ತರ್ ಕುಂಬಳೆ, ಮಿಥುನ್ ಸ್ವರ್ಗ, ಹರಿನಾಥ್ ಶೆಟ್ಟಿ ಕುಬನೂರು, ಪ್ರಶಾಂತ್ ಕುಂಟಿಕಾನ ಮತ್ತು ಉದಯ್ ಶೆಟ್ಟಿ ಸುಳ್ಯಮೆ ಉಪಸ್ಥಿತರಿದ್ದರು.
ಕ್ರೀಡಾ ಸಂಚಾಲಕರಾದ ಉದಯ ಸಾರಂಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.