Breaking Posts

6/trending/recent
Type Here to Get Search Results !

8:10:45

ಮೀಯಪದವಿನಲ್ಲಿ ವೃದ್ಧ ವ್ಯಕ್ತಿಯೊಬ್ಬರು ತನಗೆ ತಾನೇ ಗುಂಡಿಕ್ಕಿ ಆತ್ಮಹತ್ಯೆ.

ಮೀಯಪದವಿನಲ್ಲಿ ವೃದ್ಧ ವ್ಯಕ್ತಿಯೊಬ್ಬರು ತನಗೆ ತಾನೇ ಗುಂಡಿಕ್ಕಿ ಆತ್ಮಹತ್ಯೆ.
ಮಂಜೇಶ್ವರ: ಓಣಂ ಹಬ್ಬದ ಸುದಿನ (ಸೆ.5) ಮಧ್ಯಾಹ್ನದ ಮೇಲೆ ವೃದ್ಧ ವ್ಯಕ್ತಿಯೊಬ್ಬರು ತನಗೆ ತಾನೇ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೀಯಪದವಿನಲ್ಲಿ ನಡೆದಿದೆ. ಮೀಯಪದವಿನ ಮದಂಗಲ್ಲು ನಿವಾಸಿ ಸುಬ್ರಾಯ ಭಟ್ (86) ಎಂಬವರು ಮೃತ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಅಪರಾಹ್ನ ಸ್ವ-ಗೃಹದಲ್ಲಿ ಈ ಘಟನೆ ನಡೆದಿದೆ. ಸುಬ್ರಾಯ ಭಟ್ ಮತ್ತು ಪತ್ನಿ ರಾಜಮ್ಮಾಳ್ ಇಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಗೆ ತೀವ್ರ ಅನಾರೋಗ್ಯ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆತ್ಣಹತ್ಯೆ ನಡೆದಿದೆ ಎನ್ನಲಾಗಿದೆ ಈ ಸಂಬಂಧ ಹೆಚ್ಚುವರಿ ತನಿಖೆ ನಡೆಯುತ್ತಿದೆ ಎಂದು ಮಂಜೇಶ್ವರ ಪೋಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.