ತಲಪಾಡಿಯ ಮೇಲಿನ ಪೇಟೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ. 5 ಮಂದಿ ಸ್ಥಳದಲ್ಲೇ ಮೃತ್ಯು.
ಆಗಸ್ಟ್ 28, 2025
0
ತಲಪಾಡಿಯ ಮೇಲಿನ ಪೇಟೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ. 5 ಮಂದಿ ಸ್ಥಳದಲ್ಲೇ ಮೃತ್ಯು.
ಮಂಜೇಶ್ವರ: ತಲಪಾಡಿಯ ಮೇಲಿನ ಕೇರಳ ತಲಪಾಡಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ 1.30 ಕ್ಕೆ ನಡೆದಿದೆ. ತಲಪಾಡಿ ಬಳಿಯ ಕೆ.ಸಿ ರೋಡ್ ನಿಂದ ಬರುತ್ತಿದ್ದ ರಿಕ್ಷಾ ಮತ್ತು ಮಂಗಳೂರಿ ನಿಂದ ಕಾಸರಗೋಡಿಗೆ ತೆರಳುವ ಬಸ್ ಮಧ್ಯೆ ಮೇಲಿನ ತಲಪಾಡಿಯಲ್ಲಿ ಅಪಘಾತ ನಡೆದಿದ್ದು, ರಿಕ್ಷಾದಲ್ಲಿದ್ದ ಕೆ.ಸಿ ರೋಡ್ ಮೂಲದವರೆನ್ನಲಾದ 5 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದೆ ಎನ್ನಲಾಗುತ್ತಿದ್ದು, ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿರುವ ಮಾಹಿತಿಯಿದೆ. ಮಂಜೇಶ್ವರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

