ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ "ಶಾರದಾ ಪ್ರತಿಷ್ಠೆ" ಯೊಂದಿಗೆ 39 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಪ್ರಾರಂಭ.
ಸೆಪ್ಟೆಂಬರ್ 29, 2025
0
ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ "ಶಾರದಾ ಪ್ರತಿಷ್ಠೆ" ಯೊಂದಿಗೆ 39 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಪ್ರಾರಂಭ.
ಮಂಗಲ್ಪಾಡಿ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ 39 ನೇ ವರ್ಷದ ಸಾರ್ವಜನಿಕ ಶಾರದಾ ಪ್ರತಿಷ್ಠೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ಇಂದು ಬೆಳಗ್ಗೆ ಜರಗಿತು. ಧ್ವಜಾರೋಹಣವನ್ನು ಕ್ಯಾಂಪ್ಕೋ ಉಪಾಧ್ಯಕ್ಷರಾದ ಖಂಡಿಗೆ ಶಂಕರ್ ನಾರಾಯಣ ಭಟ್ ನೆರೆವೇರಿಸಿ, ಮಹೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಊರವರು ಉಪಸ್ಥಿತರಿದ್ದರು.
