ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ.
ಸೆಪ್ಟೆಂಬರ್ 29, 2025
0
ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ.
ಮಂಗಲ್ಪಾಡಿ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ ಚಿರುಗೋಳಿ ಜಿ ಎಚ್ ಡಬ್ಲ್ಯೂ ಎಲ್ ಪಿ ಶಾಲೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಪ್ರೇಮ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಬ್ಯಾಂಕಿನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ವಾರ್ಷಿಕ ವರದಿ, ಆಯವ್ಯಯ ಮತ್ತು 2026 - 27ನೇ ವರ್ಷದ ಅಂದಾಜು ಬಜೆಟನ್ನು ಮಂಡಿಸಿದರು. 2024 - 25 ನೇ ವರ್ಷದ ಬಜೆಟಿಗಿಂತ ಅಧಿಕವಾದ ಖರ್ಚು ಮತ್ತು ಆ ವರ್ಷದ ಲೆಕ್ಕ ಪರಿಶೋಧನಾ ಲೋಪ ದೋಷಗಳ ವಿವರಣೆಯನ್ನು ಬ್ಯಾಂಕಿನ ಅಧ್ಯಕ್ಷರು ಸದಸ್ಯರ ಮುಂದೆ ವಿವರಿಸಿದರು. ಈ ಸಂದರ್ಭದಲ್ಲಿ ಅಧಿಕ ಮೊತ್ತದ ನಿತ್ಯ ನಿಧಿ ಸಂಗ್ರಹಕಾರನಾದ ಮತ್ತು ತನ್ನನ್ನು ಸೇವೆಯಲ್ಲಿ ತೊಡಗಿಸಿಕೊಂಡು ಅನಾಥ ಶವಗಳ ಸಂಸ್ಕಾರ ಕಾರ್ಯ ಮುಖಾಂತರ ಸೇವೆಗೆಯುತ್ತಿರುವ ಅನಿಲ್ ಕುಮಾರನನ್ನು ಸನ್ಮಾನಿಸಲಾಯಿತು. ಮಾತ್ರವಲ್ಲದೆ ಸರಕಾರಿ ಸೀಟಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆಯನ್ನು ಹೊಂದಿ ವಿಜಯಪುರ ವೇದಿಕೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ಬ್ಯಾಂಕಿನ ಉಪ್ಪಳ ಶಾಖೆಯ ಮ್ಯಾನೇಜರ್ ಸಚ್ಚಿದಾನಂದ ಶೆಟ್ಟಿಯವರ ಮಗಳು ಕುಮಾರಿ ವೃಷ್ಟಿ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಭರತ್ ರೈ, ನಿರ್ದೇಶಕ ಮಂಡಳಿ ಸದಸ್ಯರಾದ ರವೀಶ, ಸಂಜೀವ, ಐತ, ಜಯಂತ.ವಿ, ಅಮಿತ್ ಇ.ಎಸ್, ಹರೀನಾಥ್ ಭಂಡಾರಿ, ಶ್ರೀಮತಿ ಹೇಮಾವತಿ, ರಜನಿ ಮತ್ತು ಅಮಿತ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯರಾದ ರಘು ಸಿ. ಸ್ವಾಗತಿಸಿ, ಬ್ಯಾಂಕಿನ ಲೆಕ್ಕ ತಪಾಸಣೆಗಾರರಾದ ರಾಜೇಶ್ ಎಸ್.ವಿ. ವಂದಿಸಿ, ದಿನೇಶ್ ಮುಳಿಂಜ ನಿರೂಪಿಸಿದರು. ಜನಗಣಮನದೊಂದಿಗೆ ಮಹಾಸಭೆ ಮುಕ್ತಾಯವಾಯಿತು.
