ಅಕ್ಟೋಬರ್ 2 ರಂದು ವರ್ಮಾಡಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ಮತ್ತು ಶಾರದೋತ್ಸವ ಸಮಿತಿ ವತಿಯಿಂದ 19 ನೇ ವರ್ಷದ ಶಾರದೊತ್ಸವ. ಆಮಂತ್ರಣ ಪತ್ರಿಕೆ ಬಿಡುಗಡೆ.
ಸೆಪ್ಟೆಂಬರ್ 24, 2025
0
ಅಕ್ಟೋಬರ್ 2 ರಂದು ವರ್ಮಾಡಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ಮತ್ತು ಶಾರದೋತ್ಸವ ಸಮಿತಿ ವತಿಯಿಂದ 19 ನೇ ವರ್ಷದ ಶಾರದೊತ್ಸವ. ಆಮಂತ್ರಣ ಪತ್ರಿಕೆ ಬಿಡುಗಡೆ.
ವರ್ಕಾಡಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ವರ್ಕಾಡಿ ಮತ್ತು ಶಾರದೋತ್ಸವ ಸಮಿತಿ ವರ್ಕಾಡಿ ಇದರ ವತಿಯಿಂದ ನಡೆಯುವ 19 ನೇ ವರ್ಷದ ಶಾರದೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಸುಂಕದಕಟ್ಟೆಯಲ್ಲಿ ಜರಗಿತು. ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ನಡಿಬೈಲ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನವರಾತ್ರಿಯ ಶುಭ ದಿನ, ಪರ್ವಕಾಲದಲ್ಲಿ ಶಾರದಾ ಮಾತೆಯನ್ನು ಪೂಜಿಸುವುದು ನಮ್ಮ ಕರ್ತವ್ಯವಾಗಿದೆ. ಆ ಪ್ರಯುಕ್ತ 02-10-2025 ಗುರುವಾರ ತಂತ್ರಿವರ್ಯರಾದ ಬ್ರಹ್ಮಶ್ರೀ ವರ್ಕಾಡಿ ಹೊಸಮನೆ ಶ್ರೀ ರಾಜೇಶ ತಾಳಿತ್ತಾಯರ ಮತ್ತು ವೇ.ಮೂ ಬೋಳಂತಕೋಡಿ ವಿದ್ವಾನ್ ಶ್ರೀ ರಾಮ ಭಟ್ಟರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರ, ಸುಂಕದಕಟ್ಟೆಯಲ್ಲಿ 19 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಜರಗಲಿದೆ. ಅಂದು ಬೆಳಿಗ್ಗೆ ಗಂಟೆ 8-00ಕ್ಕೆ : ಶ್ರೀ ಗಣಪತಿ ಹೋಮ 8-30 ಕ್ಕೆ : ಭಗವಾಧ್ವಜ ಆರೋಹಣ 9-30 ಕ್ಕೆ : ಶ್ರೀ ಶಾರದಾ ಪೂಜಾರಂಭ 10-00ಕ್ಕೆ : ಭಜನೆ 11-00ಕ್ಕೆ : ಅಕ್ಷರಾಭ್ಯಾಸ ಮಧ್ಯಾಹ್ನ ಗಂಟೆ 12-15 ಕ್ಕೆ: ಮಹಾಮಂಗಳಾರತಿ, ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ಕರ್ನಾಟಕ ಪ್ರಾಂತೀಯ ಧರ್ಮ ಪ್ರಚಾರ ಪ್ರಮುಖ್ ಶ್ರೀ ಸೂರ್ಯನಾರಾಯಣ
ಧಾರ್ಮಿಕ ಭಾಷಣ ಮಾಡುವರು. ವಿಶ್ವಹಿಂದೂ ಪರಿಷತ್ ಕೇರಳ ಪ್ರಾಂತೀಯ ಸಮಿತಿ ಸದಸ್ಯರಾದ
ಶ್ರೀ ಸಂಕಪ್ಪ ಭಂಡಾರಿ, ಬಳ್ಳಂಬೆಟ್ಟು, ಶ್ರೀ ಅಶೋಕ್ ಪಾವೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವುದರೊಂದಿಗೆ, ಸಹಕಾರವನ್ನು ನೀಡಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು. ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಗೌರವ ಸಲಹೆಗಾರರಾದ ಬಿ.ವಿ ಸುರೇಶ್ ದೈಗೋಳಿ , ಸೀತಾರಾಮ ಗುರುಸ್ವಾಮಿ ಕಲಿಯೂರು, ಉಪಾಧ್ಯಕ್ಷರಾದ ಸುನಿಲ್ ಬಟ್ಟೆಕಳ , ಜೊತೆ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ ಬೆಟ್ಟುಗದ್ಧೆ, ಕೋಶಾಧಿಕಾರಿ ರವಿರಾಜ್ ವರ್ಕಾಡಿ ಪದವು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಸತ್ಯನಾರಾಯಣ ಭಟ್ ನಿರ್ದೇಶಕಿ ತುಳಸಿ ಕುಮಾರಿ, ಭಾಜಪ ವರ್ಕಾಡಿ ಪಂಚಾಯತ್ ಅಧ್ಯಕ್ಷ ಭಾಸ್ಕರ ಪೊಯ್ಯ ಮಂಡಲ ಕಾರ್ಯದರ್ಶಿ ಯತಿರಾಜ್ ಶೆಟ್ಟಿ ಕೆದಂಬಾಡಿ, ವರ್ಕಾಡಿ ಪಂಚಾಯತ್ ಮಾಜಿ ಸದಸ್ಯ ಸದಾಶಿವ ನಾಯ್ಕ್ ಮಂಟಮೆ, ಓಂಕಾರ ನಾಟ್ಯಾಲಯ ವರ್ಕಾಡಿ ಇದರ ನೃತ್ಯ ಗುರು ಸುಷ್ಮಾ, ಉದಯ ಕಲಿಯೂರು ನವೀನ್ ಉಜಿರ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಜೀವನ್ ಸ್ವಾಗತಿಸಿ, ವಂದಿಸಿದರು.

