Breaking Posts

6/trending/recent
Type Here to Get Search Results !

8:10:45

ಸಹಕಾರಿ ರಂಗದಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಸಲ್ಲದು - ನ್ಯಾಯವಾದಿ ಗೋವಿಂದನ್ ಪಳ್ಳಿಕಾಪ್ಪಿಲ್.

ಸಹಕಾರಿ ರಂಗದಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಸಲ್ಲದು - ನ್ಯಾಯವಾದಿ ಗೋವಿಂದನ್ ಪಳ್ಳಿಕಾಪ್ಪಿಲ್.
ಮಂಜೇಶ್ವರ: ಸಹಕಾರಿ ಕ್ಷೇತ್ರವೆಂಬುದು ರಾಜ್ಯ ಸರಕಾರದ ಅಧೀನದಲ್ಲಿ ಇರುವ ವಿಷಯ. ಆದರೆ ಅದನ್ನು ಕೇಂದ್ರ ಸರಕಾರದ ಹಿಡಿತದಲ್ಲಿ ಇರಿಸಿಕೊಳ್ಳಲು ಗೂಢ ತಂತ್ರ ನಡೆಯುತ್ತಿರುವುದಾಗಿ ಸಿಪಿಐ ರಾಜ್ಯ ಸಮಿತಿ ಸದಸ್ಯ, ಬಿ.ಕೆ. ಎಂ.ಯು ರಾಜ್ಯ ಕಾರ್ಯದರ್ಶಿಗಳಾದ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪ್ಪಿಲ್ ಹೇಳಿದರು.
ಅವರು ಮಂಜೇಶ್ವರದಲ್ಲಿ ನಡೆದ ಕೇರಳ ಕೋ-ಓಪರೇಟಿವ್ ಎಂಪ್ಲಾಯಿಸ್ ಕೌನ್ಸಿಲ್ ಕಾಸರಗೋಡು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಎ.ಐ.ಟಿ.ಯು.ಸಿ ನೇತಾರರಾದ ಟಿ. ಕೃಷ್ಣನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು, ಕೆ.ಸಿ.ಇ.ಸಿ ಕಾರ್ಯದರ್ಶಿ ವಿನೋದನ್, ಜಯರಾಮ ಬಲ್ಲಂಗುಡೇಲ್, ಎಸ್. ರಾಮಚಂದ್ರ ನೇತಾರರು ಉಪಸ್ಥಿತರಿದ್ದರು. ರಾಮಕೃಷ್ಣ ಕಡಂಬಾರ್, ಕರುಣಾಕರ ಕುನ್ನತ್, ಕೇಶವ ಬಾಯಿಕಟ್ಟೆ ಮತ್ತು ಸುಮಿತ್ರಾ ರಾಜನ್ ರವರನ್ನೊಳಗೊಂಡ ಅಧ್ಯಕ್ಷಿಯ ಮಂಡಳಿಯ ನೇತೃತ್ವದಲ್ಲಿ ಸಮ್ಮೇಳನ ನಡೆಯಿತು.
ಬಿ. ಸುಕುಮಾರನ್, ರಾಜನ್ ನಾಯರ್, ಹರೀಶ್ ಕೆ.ಆರ್ ಮತ್ತು ಪ್ರದೀಶ್ ಬಡಾಜೆಯವರನ್ನೊಳಗೊಂಡ ನಿಯಂತ್ರಿಕ ಸಮಿತಿ ಸಮ್ಮೇಳನವನ್ನು ನಿಯಂತ್ರಿಸಿತು. ಕಾಸರಗೋಡು ಜಿಲ್ಲೆಯ ಸುಮಾರು 102 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.