ಹೊಸಂಗಡಿ "ಕೂಡೋಸ್ ಕಮ್ಯುನಿಕೇಶನ್" ಮೊಬೈಲ್ ಶಾಪ್ ಮಾಲಕ, ಬೆಜ್ಜ ಕೊಡಂಚಿಲ ನಿವಾಸಿ ಅಶ್ವಿನಿ ಕುಮಾರ್ (50) ನಿಧನ.
ಫೆಬ್ರವರಿ 11, 2025
0
ಹೊಸಂಗಡಿ "ಕೂಡೋಸ್ ಕಮ್ಯುನಿಕೇಶನ್" ಮೊಬೈಲ್ ಶಾಪ್ ಮಾಲಕ, ಬೆಜ್ಜ ಕೊಡಂಚಿಲ ನಿವಾಸಿ ಅಶ್ವಿನಿ ಕುಮಾರ್ (50) ನಿಧನ.
ಮಂಜೇಶ್ವರ: ಹೊಸಂಗಡಿಯ ಪ್ರತಿಷ್ಠಿತ "ಕೂಡೋಸ್ ಕಮ್ಯುನಿಕೇಶನ್" ಮೊಬೈಲ್ ಶಾಪ್ ಮಾಲಕ ಹೊಸಂಗಡಿ ಬಳಿಯ ಬೆಜ್ಜ ಕೊಡಂಚಿಲ ನಿವಾಸಿ ಅಶ್ವಿನಿ ಕುಮಾರ್ (50) ನಿನ್ನೆ ಬೆಳಗ್ಗೆ 4.30 ಗಂಟೆಗೆ ಹೃದಯಾಘಾತಗೊಂಡು, ಸ್ವ - ಗೃಹದಲ್ಲಿ ನಿಧನರಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಬೆಜ್ಜ ಕೌಡೂರು ನಿವಾಸಿ ರಾಜಾರಾಮ್ ಭಂಡಾರಿ - ವಿಜಯ ದಂಪತಿ ಪುತ್ರನಾಗಿದ್ದು, ಪತ್ನಿ: ಮನೀಷಾ, ಮಕ್ಕಳಾದ: ಅನ್ವಿತಾ, ಅರ್ಜುನ್, ಏಕ ಸಹೋದರಿ: ಉಷಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬೆಜ್ಜ ಕೌಡೂರುನ ಮನೆ ಪರಿಸರದಲ್ಲಿ ನಡೆಯಿತು. ಹೊಸಂಗಡಿ ಹಿಲ್ ಸೈಡ್ ಕಾಂಪ್ಲೆಕ್ಸ್ ನಲ್ಲಿ ಕಳೆದ 28 ವರ್ಷಗಳಿಂದ "ಕೂಡೋಸ್ ಕಮ್ಯುನಿಕೇಶನ್" ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಜನ ಜನಿತರಾಗಿದ್ದರು.

