ನ್ಯಾಶನಲ್ ಫ್ರೆಂಡ್ಸ್ ಕ್ಲಬ್ ಅರಿಮಲ ಸಂಸ್ಥೆಯ ನೂತನ ಕಾರ್ಯಾಲಯದ ಕಟ್ಟಡ ಉದ್ಘಾಟನೆ.
ಫೆಬ್ರವರಿ 06, 2025
0
ನ್ಯಾಶನಲ್ ಫ್ರೆಂಡ್ಸ್ ಕ್ಲಬ್ ಅರಿಮಲ ಸಂಸ್ಥೆಯ ನೂತನ ಕಾರ್ಯಾಲಯದ ಕಟ್ಟಡ ಉದ್ಘಾಟನೆ.
ಮಂಜೇಶ್ವರ: 1989 ರಲ್ಲಿ ಅರಿಮಲ ಗ್ರಾಮದ ಸಾಮಾಜಿಕ ಕಾರ್ಯಕ್ಕಾಗಿ ಸ್ಥಾಪನೆಗೊಂಡ ನ್ಯಾಶನಲ್ ಫ್ರೆಂಡ್ಸ್ ಕ್ಲಬ್ (N.F.C) 37 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ, ಇಂದು ನೂತನ ಕಾರ್ಯಾಲಯದ ಕಟ್ಟಡ ಉದ್ಘಾಟನೆಗೊಳ್ಳುವ ಮೂಲಕ ನಾಡಿಗೆ ಹೆಮ್ಮೆಯನ್ನು ತಂದಿದೆ. ಸ್ವಾವಲಂಬನೆ ಹಾಗೂ ಸಮುದಾಯದ ಸೇವೆಯಲ್ಲಿ ತನ್ನ ಶಕ್ತಿಯನ್ನು ಚಿಂತೆಗೆ ಮೀರಿ ಬೆಳೆಸಿದ "ನ್ಯಾಶನಲ್ ಫ್ರೆಂಡ್ಸ್ ಕ್ಲಬ್" ಆದರ್ಶನೀಯ ಗುಣಗಳಿಗೆ ಕಾರಣೀಭೂತವಾಗಿದೆ. ಸಂಸ್ಥೆಯ ನೂತನ ಕಟ್ಟಡವನ್ನು ಮಂಜೇಶ್ವರ ಶಾಸಕ ಎ. ಕೆ. ಎಂ ಆಶ್ರಫ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷರಾದ ಸಾಮಾಜಿಕ ಕಾರ್ಯಕರ್ತ ಸಮದ್ ಅರಿಮಲ ವಹಿಸಿದರು. ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ, ಚಲನಚಿತ್ರ ನಟ ಸಿಬಿ ಥೋಮಸ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋ ಸೇರಿದಂತೆ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಸಂಸ್ಥೆಯ ಸದಸ್ಯ ಮುನೀರ್ ಎಂ.ಕೆ ಸ್ವಾಗತಿಸಿ, ವಂದಿಸಿದರು.

