Breaking Posts

6/trending/recent
Type Here to Get Search Results !

8:10:45

ಬಲ್ಲಂಗುಡೇಲು ಪಟ್ಟತ್ತೂರು ಶ್ರೀ ಪಾಡಂಗರೆ ಭಗವತೀ ಕ್ಷೇತ್ರದ ಹಿರಿಯ ಕಾರ್ನವರಾದ ಕೇಶವ ಕಾರ್ನವರ್ (85) ದೈವೈಕ್ಯ.

ಪಟ್ಟತ್ತೂರು ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರದ ಹಿರಿಯ ಕಾರ್ನವರಾದ ಕೇಶವ ಕಾರ್ನವರ್ (85) ದೈವೈಕ್ಯ.
ಮಂಜೇಶ್ವರ: ಪಟ್ಟತ್ತೂರು ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರದ ಹಿರಿಯ ಕಾರ್ನವರಾದ ಕೇಶವ ಕಾರ್ನವರ್ (85) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಕಳೆದ ಮೂರು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಿಗ್ಗೆ 8.20 ಕ್ಕೆ ದೈವೈಕ್ಯರಾದರು. ಮೃತರ ಅಂತ್ಯ ಕ್ರಿಯೆಯ ವಿಧಿ ವಿಧಾನಗಳು ಅಪರಾಹ್ನ ಪಟ್ಟತ್ತೂರು ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರದ ಭಂಡಾರ ಮನೆಯಲ್ಲಿ ಜರುಗಿ ಬಳಿಕ ಕ್ಷೇತ್ರದ ಪರಿಸರದಲ್ಲಿ ಅಪರಾಹ್ನ 3.00 ಗಂಟೆಯ ಅವಧಿಯಲ್ಲಿ ಭಂಡಾರ ಇಳಿಸುವಿಕೆಯ ಅಂತಿಮ ಕಾರ್ಯ ನಡೆಯಲಿದೆ ಎಂದು ಮನೆಮಂದಿ ತಿಳಿಸಿದ್ದಾರೆ. ಮಂಗಳೂರು ಉರ್ವಸ್ಟೋರ್ ಬಳಿಯ ಚಿಲಿಂಬಿ ನಿವಾಸಿ ದಿ. ಸೋಮಪ್ಪ ಬೆಲ್ಚಾಡ - ದಿ. ಜಾನಕಿ ದಂಪತಿಗಳ ಪುತ್ರರಾಗಿರುವ ಕೇಶವ ಕಾರ್ನವರು 1970 ರಲ್ಲಿಯೇ ತಿಂಡಿ ತಿನಿಸುಗಳ ವ್ಯಾಪಾರ ಸಂಸ್ಥೆ ಕೆ.ಕೆ ಹೊಮ್ ಪ್ರೊಡಕ್ಟ್ ನ್ನು ಮಂಗಳೂರು ಚಿಲಿಂಬಿಯಲ್ಲಿ ಹೊಂದಿ, ಸಂಸ್ಥೆಯ ಮಾಲಕರಾಗಿದ್ದಾರೆ. ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿರುವ
ಪಟ್ಟತ್ತೂರು ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರದಲ್ಲಿ 1995 ರಿಂದ ಹಿರಿಯ ಕಾರ್ನವರು (ಉತ್ಸವ ಸಮಯದಲ್ಲಿ ದೇವರನ್ನು ಹೋರುವವರು)ರಾಗಿ ಶ್ರೀ ಭಗವತೀ ಮಾತೆಯ ದೇವರ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದರು. ಅದೇ ರೀತಿ ಕುಂಬಳೆ ಆರಿಕ್ಕಾಡಿ ಪಾರೆಸ್ತಾನ ಶ್ರೀ ಆಲಿ ಚಾಮುಂಡಿ ಭಗವತೀ ಕ್ಷೇತ್ರದ ಉತ್ಸವವನ್ನು ಮತ್ತು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಉತ್ಸವವನ್ನು ಇವರು ಒಂದು ವರ್ಷ ನಡೆಸಿದ್ದರು. ಕಳೆದ ಹಲವು ವರ್ಷಗಳಿಂದ ಅಸೌಖ್ಯ ಪೀಡಿತರಾಗಿ ಮಂಗಳೂರು ಚಿಲಂಬಿಯ ಮನೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದರು. ಕೇಶವ ಕಾರ್ನವರು ಧಾರ್ಮಿಕ, ಸಾಮಾಜಿಕ, ಮುಂದಾಳು, ಕೊಡುಗೈದಾನಿಯಾಗಿ ಸರ್ವರ ಏಳಿಗೆಗೆ ದುಡಿದು ಯುವಕರಿಗೆ ಸ್ಫೂರ್ತಿಯ ಮಾರ್ಗದರ್ಶನ ನೀಡುತ್ತಿದ್ದರು. ಮೃತರು ಪತ್ನಿ: ರೇವತಿ, ಮಕ್ಕಳಾದ: ವಿನೋದ್, ಮಮತಾ, ದಿವ್ಯ, ರಾಜೇಶ್, ಸುಜಾತ, ಕವಿತಾ, ರೇಖಾ, ಅಳಿಯಂದಿರಾದ: ಪತ್ರಕರ್ತ, ರಂಗ ಕಲಾವಿದ, ಖ್ಯಾತ ನಿರೂಪಕ, ಉಳ್ಳಾಲ ತೀಯಾ ಕೋ - ಆಪರೇಟಿವ್ ಸೊಸೈಟಿಯ ನಿರ್ದೇಶಕ ಸತೀಶ್ ಕುಮಾರ್ ಪುಂಡಿಕಾಯಿ, ಬಿಜು ಕಾಣ್ಯಂಗಾಡ್, ಕೇಶವ ಕೊಲ್ಯ, ಪ್ರಸನ್ನ ಉಳ್ಳಾಲ, ರಾಜೇಶ್ ಕಡಂಬಾರು,ಸೊಸೆ: ಸರಿತಾ, ಏಕ ಸಹೋದರಿ: ಗೀತಾ ಸೇರಿದಂತೆ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಕೇಶವ ಕಾರ್ನವರ ನಿಧನಕ್ಕೆ: ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರದ ಆಡಳಿತ ಸಮಿತಿ, ಸೇವಾ ಸಮಿತಿ, ಮಹಿಳಾ ಸಂಘ, ಜೀರ್ಣೋದ್ಧಾರ ಸಮಿತಿ, ತೀಯಾ ಸಮಿತಿ, ಕ್ಷೇತ್ರದ ಗುರಿಕಾರರು, ಆಚಾರ ಪಟ್ಟವರು, ಹಾಗೂ ಮೂರು ಗ್ರಾಮದ ಹತ್ತು ಸಮಸ್ತರು, ನಲುವತ್ತು ಬಿಲ್ಲಿಯ ಸಮಸ್ತರು ಮತ್ತು ಗೆಳೆಯರ ಬಳಗ (ರಿ.) ಬಲ್ಲಂಗುಡೇಲು ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.