Breaking Posts

6/trending/recent
Type Here to Get Search Results !

8:10:45

ಸಮಸ್ತ - ಫಾಳಿಲ : ಮೊದಲ ಸನದುದಾನ ಸಮ್ಮೇಳನ ಬೇಕೂರ್ ಸೀ ಪಾಲಸ್ ನಲ್ಲಿ ಇಂದಿನಿಂದ ಆರಂಭ.

ಸಮಸ್ತ - ಫಾಳಿಲ : ಮೊದಲ ಸನದುದಾನ ಸಮ್ಮೇಳನ ಬೇಕೂರ್ ಸೀ ಪಾಲಸ್ ನಲ್ಲಿ ಇಂದಿನಿಂದ ಆರಂಭ.
ಉಪ್ಪಳ : ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧೀನದಲ್ಲಿರುವ ಫಾಳಿಲ ಕೋರ್ಸಿನ ಮೊದಲ ಸನದುದಾನ ಸಮ್ಮೇಳನ 2025 ಜನವರಿ 29 ಬುಧವಾರ ಬೇಕೂರಿನ ಸೀ ಪಾಲಸ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ಓಬರ್ಳ ಬೇಕೂರಿನ ನೂರುಲ್ ಹುದಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಫಾಳಿಲ ಫಳೀಲ ಕೋರ್ಸ್ ಗಳು ನಡೆಯುತ್ತಾ ಬರುತ್ತಿದೆ. 2019ರಲ್ಲಿ ಪ್ರಾರಂಭಿಸಿದ ಕೌನ್ಸಿಲ್ ಓಫ್ ಸಮಸ್ತ ವಿಮೆನ್ಸ್ ಕಾಲೇಜಿನ ಅಧೀನದಲ್ಲಿ ನೂರಕ್ಕೂ ಅಧಿಕ ಡೇ ಕಾಲೇಜುಗಳು ಕಾರ್ಯಚರಿಸುತ್ತಿದೆ.. ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿಯ ಸಮಾಲೋಚನೆ ಸಭೆ ಸೀ ಪಾಲಸ್ ನಲ್ಲಿ ನಡೆಯಿತು ಯಶಸ್ವಿ ಹಾಗು ಪ್ರಚಾರದ ಬಗ್ಗೆ ಹಲವು ಪದ್ಧತಿಗಳು ಸಭೆಯಲ್ಲಿ ಚರ್ಚಿಸಿಲಾಯಿತು.. ಎಸ್ ಎಸ್ ಎಲ್ ಸಿ ಯ ನಂತರ ಮುಂದಿನ ಅಧ್ಯಯನ ಆಲೋಚಿಸುವ ವಿಧ್ಯಾರ್ಥಿನಿಗಳಿಗೆ ಉತ್ತಮ ಹಾಗು ಸುರಕ್ಷಿತ ವ್ಯವಸ್ಥೆ ಯಾಗಿದೆ ಫಾಳಿಲ ಕೋರ್ಸ್. ಚಿಂತಕರಾದ ಫಾಕಲ್ಟಿಗಳ ನಿಯಂತ್ರಣದಲ್ಲಿ ಆರ್ಟ್ಸ್ ವಿಷಯದಲ್ಲಿ ಹ್ಯೂಮನಿಟಿಸಂ, ಅಕೌಂಟ್ ವಿಭಾಗದಲ್ಲಿ ಆಸಕ್ತಿಯಿರುವವರಿಗೆ ಕೋಮರ್ಸ್ ಸಹ ಫಾಳಿಲ ಕೋರ್ಸಿನೊಂದಿಗೆ ನೀಡಲಾಗುತ್ತದೆ. ಪದವಿ ಶಿಕ್ಷಣ ಪೂರ್ತಿಕರಿಸಿದವರಿಗೆ ಸಮಸ್ತ ನಡೆಸುವ ಕಾರ್ಯಕ್ರಮಗಳಲ್ಲಿ ಫಳೀಲ ಸನದು ಸಹ ನೀಡಲಾಗುತ್ತಿದೆ.. ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುವ ಸನದುದಾನ ಸಮಾರಂಭ ಸಮಸ್ತ ಫಾಳಿಲ ಫಳೀಲ CSWC ಚಯರ್ಮಾನ್ ಶೈಖುನಾ ಎಂಟಿ ಉಸ್ತಾದ್ ಉದ್ಘಾಟಿಸಲಿದ್ದಾರೆ.. NHWSC ಚಯರ್ಮಾನ್ ಉಸ್ತಾದ್ ಅಬ್ದುಲ್ ಮಜೀದ್ ದಾರಿಮಿ ಅಧ್ಯಕ್ಷತೆ ವಹಿಸಲಿದ್ದು, ಉಸ್ತಾದ್ ಸುಲೈಮಾನ್ ಫೈಝಿ ಚುಂಗತ್ತರ ಸನದುದಾನ ಭಾಷಣ ಮಾಡಲಿದ್ದಾರೆ ಅಕಾಡೆಮಿ ಪರಿಚಯ ಸೆಷನ್ ಸಅದ್ ಫೈಝಿ ಅಲ್ ಬುರ್ಹಾನಿ ನಿಯಂತ್ರಿಸಲಿದ್ದಾರೆ.
ಮುಂದಿನ ಯೋಜನಗಳ ಕುರಿತು ಸ್ವಾಗತ ಸಮಿತಿ ಚಯರ್ಮಾನ್ ಅಬೂಬಕರ್ ರೋಯಲ್ ಬಳ್ಳೂರ್ ವಿವರಿಸಲಿದ್ದಾರೆ. ಸಮಸ್ತ ಮಂಜೇಶ್ವರ ಮಂಡಲ ನೇತಾರರ ಸಹಿತ ಹಲವಾರು ಧಾರ್ಮಿಕ ಸಾಮಾಜಿಕ ರಾಜಕೀಯ ನೆತಾರರು ಭಾಗವಹಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.