Breaking Posts

6/trending/recent
Type Here to Get Search Results !

8:10:45

ಮುಳ್ಳೆರಿಯಾ: ನಾಕೂರು ನೆಟ್ಟಣಿಗೆ ನಿವಾಸಿ, ಕಮ್ಮಾರ ವೃತ್ತಿಗ, ಲಕ್ಷ್ಮಣ ಆಚಾರ್ಯ (57) ನಿಧನ.

ಮುಳ್ಳೆರಿಯಾ: ನಾಕೂರು ನೆಟ್ಟಣಿಗೆ ನಿವಾಸಿ, ಕಮ್ಮಾರ ವೃತ್ತಿಗ, ಲಕ್ಷ್ಮಣ ಆಚಾರ್ಯ (57) ನಿಧನ.
ಮುಳ್ಳೆರಿಯಾ: ನಾಕೂರು ನೆಟ್ಟಣಿಗೆ ನಿವಾಸಿ ದಿ. ಬಟ್ಯಪ್ಪ ಆಚಾರ್ಯರ ಪುತ್ರ ಲಕ್ಷ್ಮಣ ಆಚಾರ್ಯ (57) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದು, ಕಮ್ಮಾರ ವೃತ್ತಿ ಮಾಡುತ್ತಿದ್ದರು. ಮೃತರು ತಾಯಿ: ಸಂಜೀವಿ, ಪತ್ನಿ ಲೀಲಾವತಿ, ಮಕ್ಕಳಾದ ವಿಶ್ವ ಪ್ರಕಾಶ್, ಧನ್ಯ ಶ್ರೀ, ಸಹೋದರ - ಸಹೋದರಿಯರಾದ ಶಾರದಾ, ಪುಷ್ಪಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರ ಪುರೋಹಿತ ಗಂಗಾಧರ ಆಚಾರ್ಯ ಈ ಮೊದಲೇ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ರಾತ್ರಿ ಮನೆ ಹಿತ್ತಲಿನಲ್ಲಿ ನಡೆಯಿತು.ಮೃತರು ಮಧೂರು ಶ್ರೀ ಕಾಳಿಕಾಂಬಾ ಮಠದ ಆಡಳಿತ ಸಮಿತಿಯ ಮಾಜಿ ಸದಸ್ಯರಾಗಿದ್ದು, ಸದ್ರಿ ಕ್ಷೇತ್ರದ ಮುಳ್ಳೇರಿಯಾ ಪ್ರಾಂತ್ಯದ ಸದಸ್ಯರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.