ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬದಿಯಡ್ಕ ನಗರ ಸಮಿತಿ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನೆ.
ಜುಲೈ 02, 2024
0
ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬದಿಯಡ್ಕ ನಗರ ಸಮಿತಿ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನೆ.
ಬದಿಯಡ್ಕ: "ಹಿಂದೂಗಳೆಲ್ಲರೂ ಹಿಂಸೆಯನ್ನು ಮಾಡುವವರು" ಎಂದಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬದಿಯಡ್ಕ ನಗರ ಸಮಿತಿ ವತಿಯಿಂದ ಬದಿಯಡ್ಕ ಪೇಟೆಯಲ್ಲಿ ಇಂದು ಸಂಜೆ ಪ್ರತಿಭಟನೆ ಮೆರವಣಿಗೆ ನಡೆಯಿತು. ಬದಿಯಡ್ಕ ಗಣೇಶ್ ಮಂದಿರದಿಂದ ಹೊರಟ ಮೆರಣಿಗೆಯು ಪೇಟೆಯಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ ಪ್ರತಿಭಟನೆ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಮಾಜಿ ಪ್ರಖಂಡ ಅಧ್ಯಕ್ಷ ಮುರಳೀಧರ ಯಾದವ್ ನಾಯ್ಕಾಪ್ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಕಣ್ಣೂರು ವಿಭಾಗ ಸೇವಾ ಪ್ರಮುಖ್ ಸುರೇಶ್ ಶೆಟ್ಟಿ ಪರಂಕಿಲ, ಜಿಲ್ಲಾ ಸಹ ಕಾರ್ಯದರ್ಶಿ ಹರೀಶ್ ಬದಿಯಡ್ಕ, ಪ್ರಖಂಡ ಅಧ್ಯಕ್ಷ ಸುನಿಲ್ ಪೂಮಾನಿ ಕಿನ್ನಿಮಾನಿ, ಸುನಿಲ್ ಬದಿಯಡ್ಕ, ಬಿ.ಎಂ.ಎಸ್ ನೇತಾರ ರವಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರ ಸಮಿತಿ ಸಂಚಾಲಕ ರೂಪೇಶ್, ಧನ್ ರಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹರೀಶ್ ನಾರಂಪಾಡಿ ಸ್ವಾಗತಿಸಿ, ಮಂಜುನಾಥ ಮಾನ್ಯ ವಂದಿಸಿದರು.

