ಉಪ್ಪಳ: ಧಾರ್ಮಿಕ ಮುಂದಾಳು ಮುಳಿಂಜಗುತ್ತು ಸಂಜೀವ ಭಂಡಾರಿ ನಿಧನ. ಪತ್ನಿ ನಿಧನರಾಗಿ ಎರಡು ತಿಂಗಳು ಮಾಸುವ ಮುನ್ನ ಸಂಜೀವ ಭಂಡಾರಿಯವರ ನಿಧನ. ದುಃಖ ತಪ್ತರಾದ ಕುಟುಂಬ.
ಜುಲೈ 02, 2024
0
ಉಪ್ಪಳ: ಧಾರ್ಮಿಕ ಮುಂದಾಳು ಮುಳಿಂಜಗುತ್ತು ಸಂಜೀವ ಭಂಡಾರಿ ನಿಧನ. ಪತ್ನಿ ನಿಧನರಾಗಿ ಎರಡು ತಿಂಗಳು ಮಾಸುವ ಮುನ್ನ ಸಂಜೀವ ಭಂಡಾರಿಯವರ ನಿಧನ. ದುಃಖ ತಪ್ತರಾದ ಕುಟುಂಬ.
ಉಪ್ಪಳ: ಪತ್ನಿ ನಿಧನರಾಗಿ ಎರಡು ತಿಂಗಳು ಕಳೆಯುವ ಮೊದಲೇ ಪತಿ ನಿಧನರಾಗಿರುವ ಘಟನೆ ಉಪ್ಪಳದಲ್ಲಿ ನಡೆದಿದೆ. ಗಣೇಶ್ ಬಜಾರ್ ನಿವಾಸಿ, ಧಾರ್ಮಿಕ ಸಾಮಾಜಿಕ ಮುಂದಾಳು ಮುಳಿಂಜಗುತ್ತು ಮನೆತನದ ಯಜಮಾನ ಸಂಜೀವ ಭಂಡಾರಿ (87) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಸ್ವ - ಗೃಹದಲ್ಲಿ ನಿಧನರಾದರು. ಮೃತರ ಧರ್ಮ ಪತ್ನಿ ಮುತ್ತಕ್ಕೆ ಏಪ್ರಿಲ್ 25 ರಂದು ಅಸೌಖ್ಯದಿಂದ ನಿಧನರಾಗಿದ್ದರು. ಮೃತರ ದುಃಖ ಮಾಸುವ ಮುನ್ನವೇ ಇದೀಗ ಪತಿ ಸಂಜೀವ ಭಂಡಾರಿಯವರರು ನಿಧನರಾಗಿದ್ದು, ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಸಂಜೀವ ಭಂಡಾರಿಯವರು ಧಾರ್ಮಿಕ, ಸಾಮಾಜಿಕ, ಮುಂದಾಳು ವಾಗಿದ್ದು, ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕ್ಷೇತ್ರದ ಅಭಿವೃದ್ಧಿಯ ರೂವಾರಿಯಾಗಿದ್ದರು. ನಾಟಿ ವೈದ್ಯರಾಗಿ ಜನಸೇವೆಯಲ್ಲಿ ತೊಡಗಿದ್ದರು. ಆರ್.ಎಸ್.ಎಸ್, ಬಿಜೆಪಿ ಪಕ್ಷದಲ್ಲಿ ಹಿರಿಯ ಕಾರ್ಯಕರ್ತರಾಗಿದ್ದರು. ಮೃತರು ಮಕ್ಕಳಾದ ನಾರಾಯಣ ಭಂಡಾರಿ, ಬಾಲಕೃಷ್ಣ ಭಂಡಾರಿ, ನಿತ್ಯಾನಂದ ಭಂಡಾರಿ, ಚಂದ್ರಶೇಖರ ಭಂಡಾರಿ, ರವಿರಾಜ್ ಭಂಡಾರಿ, ಶಿವಪ್ರಸಾದ್ ಭಂಡಾರಿ, ಶಶಿಕಲಾ, ಸತ್ಯವತಿ, ಅಳಿಯಂದಿರಾದ ಯತಿರಾಜ್ ರೈ, ರವೀಂದ್ರ ರೈ, ಸೊಸೆಯಂದಿರಾದ ವಿಜಯಲಕ್ಷ್ಮಿ, ಸುನಿತಾ, ಲಕ್ಷ್ಮಿ, ಪ್ರಮೀಳಾ, ಸ್ವಾತಿ, ಅಂಕಿತ, ಸಹೋದರರಾದ ಮಾರಪ್ಪ ಭಂಡಾರಿ, ಬಾಲಕೃಷ್ಣ ಭಂಡಾರಿ ಸುಂದರ ಭಂಡಾರಿ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಮುತ್ತಕ್ಕೆ, ಓರ್ವ ಪುತ್ರ ಜಯರಾಮ ಭಂಡಾರಿ ಈ ಹಿಂದೆ ನಿಧನರಾಗಿದ್ದಾರೆ.
