ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಬಾಕ್ರಬೈಲ್ ಎ.ಯು.ಪಿ ಶಾಲೆ ಪಾತೂರು ಯು.ಪಿ ಹಾಗೂ ಎಲ್. ಪಿ ವಿಭಾಗದ ನಿರ್ಮಾಣ ಸ್ಪರ್ಧೆಯಲ್ಲಿ ಅಗ್ರಸ್ಥಾನ.
ನವೆಂಬರ್ 07, 2023
0
ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಬಾಕ್ರಬೈಲ್ ಎ.ಯು.ಪಿ ಶಾಲೆ ಪಾತೂರು ಯು.ಪಿ ಹಾಗೂ ಎಲ್. ಪಿ ವಿಭಾಗದ ನಿರ್ಮಾಣ ಸ್ಪರ್ಧೆಯಲ್ಲಿ ಅಗ್ರಸ್ಥಾನ.
ಮಂಜೇಶ್ವರ: ಕುಂಜತ್ತೂರು ವೋಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಬಾಕ್ರಬೈಲ್ ಎ.ಯು.ಪಿ ಶಾಲೆ ಪಾತೂರು ಯು.ಪಿ ಹಾಗೂ ಎಲ್. ಪಿ ವಿಭಾಗದ ನಿರ್ಮಾಣ ಸ್ಪರ್ಧೆಯಲ್ಲಿ ಅಗ್ರಸ್ಥಾನವನ್ನು ಗಳಿಸಿದೆ. ಎಲ್.ಪಿ ವಿಭಾಗದಲ್ಲಿ ಕಾಲೊರಸು ತಯಾರಿಯಲ್ಲಿ ಫಾತಿಮಾ ಹನಾನ, ಮರದ ಕೆಲಸದಲ್ಲಿ ಸಲ್ಮಾನ್ ಫಾರಿಸ್, ತಾಳೆಗರಿ ಉತ್ಪನ್ನದಲ್ಲಿ ಫಾತಿಮತ್ ಶಮ್ನ, ತೆಂಗಿನ ಗೆರಟೆ ಉತ್ಪನ್ನದಲ್ಲಿ ಮಹಮ್ಮದ್ ಮಿದ್ಲಾಜ್ ಎಂಬಿ ವಿದ್ಯಾರ್ಥಿಗಳು ಎ. ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಬರೆಯುವ ಚಾಕ್ ತಯಾರಿಯಲ್ಲಿ ಮಹಮ್ಮದ್ ಸಿನಾನ್ ಮತ್ತು ವೇಸ್ಟ್ ಮೆಟೀರಿಯಲ್ ತಯಾರಿಯಲ್ಲಿ ಮೊಹಮ್ಮದ್ ಶಾಹಿದ್, ದ್ವಿತೀಯ ಸ್ಥಾನ, ಬ್ಯಾಡ್ಮಿಂಟನ್ ನೆಟ್ ಮೇಕಿಂಗ್ ನಲ್ಲಿ ಮೊಹಮ್ಮದ್ ತಾಜುದ್ದೀನ್ ಎ ಗ್ರೇಡ್ ನೊಂಡಿಗೆ ತೃತೀಯ ಸ್ಥಾನವನ್ನೂ, ಮೆಟಲ್ ಎಂಗ್ರಾವಿಂಗ್ ನಲ್ಲಿ ಮಹಮ್ಮದ್ ರಫಿ ಸನಾದ್, ಕೊಡೆ ತಯಾರಿಯಲ್ಲಿ ಅಫ್ರಾ ಫಾತಿಮಾ, ಥ್ರೆಡ್ ಪ್ಯಾಟರ್ನ್ ನಲ್ಲಿ ನೆಫಿಸತ್ ಶಬ್ನ ಎ ಗ್ರೇಡ್ ಪಡೆದಿರುತ್ತಾರೆ. ಯು.ಪಿ ವಿಭಾಗದ
ಬರೆಯುವ ಚಾಕ್ ತಯಾರಿಯಲ್ಲಿ ಚೇತನ್, ಕಾಲೊರಸು ತಯಾರಿಯಲ್ಲಿ ರಕ್ಷ, ತಾಳೆಗರಿ ಉತ್ಪನ್ನದಲ್ಲಿ ನಫಿಸತುಲ್ ವಫಿಯ, ತೆಂಗಿನ ಗೆರಟೆಯ ಉತ್ಪನ್ನದಲ್ಲಿ ಮೊಹಮ್ಮದ್ ಶಾಮಿಲ್ ಕೆ ಪಿ, ಮೆಟಲ್ ಎಂಗ್ರವಿಂಗ್ ಮೊಹಮ್ಮದ್ ಹಾಶಿಕ್, ಬ್ಯಾಡ್ಮಿಂಟನ್ ನೆಟ್ ಮೇಕಿಂಗ್ ಆಯಿಶತ್ ತೋಯ್ಬಾ, ಮರದ ಕೆಲಸದಲ್ಲಿ ಉಜೈಫ್ ಎಂಬೀ ವಿದ್ಯಾರ್ಥಿಗಳು ಎ. ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಥ್ರೆಡ್ ಪ್ಯಾಟರ್ನ್ ನಲ್ಲಿ ಫಾತಿಮಾತ್ ರಾಫಿದ ದ್ವಿತೀಯ ಸ್ಥಾನವನ್ನು ಹಾಗೂ ಕೊಡೆ ತಯಾರಿಯಲ್ಲಿ ಸಾರತ್ ಸನ ಮತ್ತು ವೇಸ್ಟ್ ಮೆಟೀರಿಯಲ್ ತಯಾರಿಯಲ್ಲಿ ಫಾತಿಮತ್ ರುಫೈದ ಎ. ಗ್ರೇಡ್ ಪಡೆದಿದ್ದಾರೆ.
