Breaking Posts

6/trending/recent
Type Here to Get Search Results !

8:10:45

A.I.Y.F ಮಂಜೇಶ್ವರ ಮಂಡಲ ಸಮಿತಿ ನೇತತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಮಂಜೇಶ್ವರ ರೈಲು ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್.

A.I.Y.F ಮಂಜೇಶ್ವರ ಮಂಡಲ ಸಮಿತಿ ನೇತತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಮಂಜೇಶ್ವರ ರೈಲು ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್.
ಮಂಜೇಶ್ವರ: ರೈಲು ಪ್ರಯಾಣಿಕರ ಸಂಕಷ್ಟ ಪರಿಹರಿಸಿ, ರೈಲ್ವೆಯ ನಿರ್ಲಕ್ಷ್ಯ ಕೊನೆಗೊಳಿಸಿ, ಪ್ಯಾಸೆಂಜರ್ ರೈಲುಗಳ ಬೋಗಿಗಳನ್ನು ಹೆಚ್ಚುಗೊಳಿಸಿ, ವಂದೇ ಭಾರತ್ ರೈಲನ್ನು ಮಂಗಳೂರು ತನಕ ವಿಸ್ತರಿಸಿ, ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು A.I.Y.F ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲು ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್ ನಡೆಯಿತು.
A.I.Y.F ಮಂಜೇಶ್ವರ ಮಂಡಲ ಅಧ್ಯಕ್ಷ ಶರತ್ ಬೆಜ್ಜ ಅಧ್ಯಕ್ಷತೆ ವಹಿಸಿದರು. A.I.Y.F ಜಿಲ್ಲಾ ಕಾರ್ಯದರ್ಶಿ ಎಂ. ಶ್ರೀಜಿತ್ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿದರು. A.I.Y.F ಜಿಲ್ಲಾ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ ಭಾಗ್, A.I.Y.F ರಾಜ್ಯ ಸಮಿತಿ ಸದಸ್ಯ ಧನೀಶ್ ಬಿರಿಕುಳಂ, A.I.S.F ನೇತಾರೆ ಅಮ್ಮು ಜನಾರ್ಧನನ್ ಮೊದಲಾದವರು ಭಾಷಣ ಮಾಡಿದರು. ದಯಾಕರ ಮಾಡ ಸ್ವಾಗತಿಸಿ, ಸುನೀತಾ ವಾಲ್ಟಿ ಡಿ.ಸೋಜ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.