Breaking Posts

6/trending/recent
Type Here to Get Search Results !

8:10:45

ಪುತ್ತೂರು ಕಲ್ಲೆಗ ಟೈಗರ್ ಖ್ಯಾತಿಯ ಅಕ್ಷಯ್ ಕೊಲೆ. ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಗೆ.

ಪುತ್ತೂರು : ಪುತ್ತೂರು ಪೇಟೆಯ ನೆಹರೂ ನಗರದಲ್ಲಿ ನಿನ್ನೆ ತಡರಾತ್ರಿ ನಡೆದ ಬರ್ಬರ ಹತ್ಯೆ ಪ್ರಕರಣದಲ್ಲಿ ಪ್ರಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್‌ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್‌ ಕಲ್ಲೇಗ ಹತ್ಯೆಯಾಗಿದ್ದು, ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್​, ಚೇತನ್​ ಮತ್ತು ಮನೀಶ್ ಬಂಧಿತ ಆರೋಪಿಗಳು. ಸೋಮವಾರ ​ಸಂಜೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್‌ ಹಾಗೂ ಆರೋಪಿಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅಪಘಾತ ನಷ್ಟದ ಬಾಬ್ತು ಮಾತನಾಡಲೆಂದು ಪುನ: ಆರೋಪಿಗಳು ಅಕ್ಷಯ್‌ನನ್ನು ರಾತ್ರಿ 11.30 ಗಂಟೆ ಸುಮಾರಿಗೆ ನೆಹರೂ ನಗರ ಬಳಿ ಕರೆದು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಚೇತನ್‌, ಮನೀಶ್‌, ಮಂಜ ಮತ್ತು ಕೇಶವ ಎಂಬುವವರು ಅಕ್ಷಯ್‌ ಕಲ್ಲೇಗ ಅವರೊಂದಿಗೆ ದೂರವಾಣಿ ಮೂಲಕ ಅವಾಚ್ಯವಾಗಿ ಬೈದು, ಕೊನೆಗೆ ತಾವು ತಂದಿದ್ದ 2 ತಲವಾರಿನಿಂದ ಹಲ್ಲೆ ನಡೆಸಿದ್ದು, ಅನಂತರ ಕಡಿದು ಕೊಲೆ ಮಾಡಿ ಹೋಗಿದ್ದಾರೆ ಎಂದು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ; 106-2023 ರಂತೆ ಕಲಂ: 341,504,506,307, ಜೊತೆಗೆ 34 IPC ಯಂತೆ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.