ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ಕಾಸರಗೋಡು ಇದರ ವತಿಯಿಂದ ಕೇರಳ ರಾಜ್ಯೋತ್ಸವ.
ನವೆಂಬರ್ 07, 2023
0
ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ಕಾಸರಗೋಡು ಇದರ ವತಿಯಿಂದ ಕೇರಳ ರಾಜ್ಯೋತ್ಸವ.
ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ಕಾಸರಗೋಡು ಇದರ ವತಿಯಿಂದ ಕೇರಳ ರಾಜ್ಯೋತ್ಸವದ ಪ್ರಯುಕ್ತ ತುಳುನಾಡನ್ ಕಳರಿ ಮರ್ಮಾಶ್ರಮ ಇದರ ಸ್ಥಾಪಕ ಮುಲ್ಲಶ್ಶೇರಿ ರತ್ನಾಕರ ಪಿಳ್ಳೆಯವರನ್ನು ಯೂನಿಟ್ ಅಧ್ಯಕ್ಷರಾದ ಮೈಂದಪ್ಪ ಕೆ.ಎಂ ಅವರು ಅಧ್ಯಕ್ಷತೆ ಮಾತುಗಳನ್ನಾಡಿ ಶಾಲು ಹೊದಿಸಿ ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪರಂಪರಾಗತವಾಗಿ ಲಭಿಸಿದ ಕೇರಳದ ಕಳರಿ ವಿದ್ಯೆ ಜೊತೆಗೆ ತುಳುನಾಡ ಗರಡಿ ವಿದ್ಯೆ ಅಭ್ಯಷಿಸಿ 30 ವರ್ಷಗಳಿಂದ ಕಾಸರಗೋಡು ಬಾರ ಎಂಬಲ್ಲಿ ಕಳರಿ ಕಲಿಕಾ ತರಗತಿಯನ್ನು ಪ್ರಾರಂಭಿಸಲಾಯಿತು. ಕಾಞಂಗಾಡಿನಲ್ಲಿ ಮರ್ಮ ಚಿಕಿತ್ಸೆ ನೀಡುತ್ತಿದ್ದೇವೆ, ಹಲವು ಕಡೆಗಳಿಂದ ಜನರು ಚಿಕಿತ್ಸೆಗೆ ಆಗಮಿಸುತ್ತಿದ್ದು, ತಚ್ಚಂಗಾಡ್ ಹಾಗೂ ಕಾಸರಗೋಡಿನಲ್ಲಿ ಕಳರಿ ತರಗತಿಯನ್ನು ನೀಡುತ್ತಿದ್ದೇವೆ. ಮುಂದಿನ ಪೀಳಿಗೆಗೆ ಈ ವಿದ್ಯೆಯ ಮಹತ್ವವನ್ನು ತಿಳಿಯಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸನ್ಮಾನಿತರು ನುಡಿದರು. ಈ ಸಂಧರ್ಭದಲ್ಲಿ ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್ ರಾಮು ವಿಡಿಯೋ ವಲಯ ಪಿ.ಆರ್.ಒ ಚಂದ್ರಶೇಖರ.ಎಂ, ಯೂನಿಟ್ ಕೋಶಾಧಿಕಾರಿ ಅಮಿತ್, ಯೂನಿಟ್ ಪಿ.ಆರ್.ಒ ಸುಬ್ರಹ್ಮಣ್ಯ.ಎಂ.ಎಸ್, ಯೂನಿಟ್ ಸದಸ್ಯರಾದ ನಾರಾಯಣನ್.ಟಿ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ, ಯೂನಿಟ್ ಉಪಾಧ್ಯಕ್ಷರಾದ ಗಣೇಶ್ ರೈ ಧನ್ಯವಾದ ನೀಡಿದರು.

