ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ.
ನವೆಂಬರ್ 01, 2023
0
ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಮಂಜೇಶ್ವರ: ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಕುಂಜತ್ತೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಭಾಗವಹಿಸಿ ವಿವಿಧ ಕಲಾ ಪ್ರಕಾರಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಜ್ವಲ್ ಡಿಜಿಟಲ್ ಪೇಂಟಿಂಗ್ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ, ತೇಜಸ್ ಕೆ ಬೇಂಬೊ ಪ್ರಾಡಕ್ಟ್ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ, ಹರಿಪ್ರಸಾದ್ ಜಿ .ಸೀಟ್ ಮೆಟಲ್ ವರ್ಕ್ ಎ ಗ್ರೇಡಿ ನೊಂದಿಗೆ ಪ್ರಥಮ ಸ್ಥಾನ, ರಂಸೀನಾ ಕಯರ್ ಡೋರ್ ಮ್ಯಾಟ್ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ, ಲೋಯನ್ ಡಿಸೋಜ ಪ್ಯಾಟರ್ನ್ ಯೂಸಿಂಗ್ ತ್ರೆಡ್ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ, ಫಾತಿಮಾತ್ ಹಬೀಬ ರೈಟಿಂಗ್ ಚಾಕ್ ಮೇಕಿಂಗ್ ಎ ಗ್ರೇಡಿ ನೊಂದಿಗೆ ಪ್ರಥಮ ಸ್ಥಾನ, ಮೊಹಮ್ಮದ್ ಸಿನಾನ್ ಕೋಕನಟ್ ಶೆಲ್ ಪ್ರೊಡಕ್ಟ್ ಎ ಗ್ರೇಡಿನೊಂದಿಗೆ ನೊಂದಿಗೆ ದ್ವಿತೀಯ ಸ್ಥಾನ, ಶಶಾಂಕ್ ಕೆ ವುಡ್ ಕಾರ್ವಿಂಗ್ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ವನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದರೊಂದಿಗೆ ಮೊಹಮದ್ ಸೂಫಿಯಾನ್ ಮೆಟಲ್ ಎನ್ ಗ್ರೇವಿಂಗ್ ನಲ್ಲಿ ಎ ಗ್ರೇಡಿನೊಂದಿಗೆ ತೃತೀಯ ಸ್ಥಾನ, ಚೈತ್ರ ಎಂಬ್ರಾಯ್ಡರಿ ಯಲ್ಲಿ ಎ ಗ್ರೇಡ್, ನಶ್ಮಿ ಫ್ಯಾಬ್ರಿಕ್ ಪೇಂಟಿಂಗ್ ನಲ್ಲಿ ಎ ಗ್ರೇಡ್ , ಫಾತಿಮಾತ್ ನೆಜೀಬ ಅಗರಬತ್ತಿ ಮೇಕಿಂಗ್ ನಲ್ಲಿ ಎ ಗ್ರೇಡ್ ನ್ನು ಪಡೆದುಕೊಂಡಿದ್ದಾರೆ.



