ಬ್ರಹ್ಮಮುಗೇರ ದೈವಸ್ಥಾನ ಬೋಳದ ಪದವು, ವರ್ಕಾಡಿಯಲ್ಲಿ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಜ್ಯೋತಿಷ್ಯ ರತ್ನ ಪೈಯ್ಯನ್ನೂರು ಗೋಪಾಲಕೃಷ್ಣ ಪಣಿಕರವರ ಸಾರಥ್ಯದಲ್ಲಿ ತಾಂಬೂಲ ಪ್ರಶ್ನೆ ಚಿಂತನೆ. ನವೆಂಬರ್ 5 ರಂದು ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮುಷ್ಟಿ ಕಾಣಿಕೆ, ದೀಪ ಸಮರ್ಪಣೆ.
ನವೆಂಬರ್ 01, 2023
0
ಬ್ರಹ್ಮಮುಗೇರ ದೈವಸ್ಥಾನ ಬೋಳದ ಪದವು, ವರ್ಕಾಡಿಯಲ್ಲಿ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಜ್ಯೋತಿಷ್ಯ ರತ್ನ ಪೈಯ್ಯನ್ನೂರು ಗೋಪಾಲಕೃಷ್ಣ ಪಣಿಕರವರ ಸಾರಥ್ಯದಲ್ಲಿ ತಾಂಬೂಲ ಪ್ರಶ್ನೆ ಚಿಂತನೆ. ನವೆಂಬರ್ 5 ರಂದು ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮುಷ್ಟಿ ಕಾಣಿಕೆ, ದೀಪ ಸಮರ್ಪಣೆ.
ಮಂಜೇಶ್ವರ: ಬ್ರಹ್ಮ ಮುಗೇರ ದೈವಸ್ಥಾನ ಬೋಳದ ಪದವು, ವರ್ಕಾಡಿಯಲ್ಲಿ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಪ್ರಶ್ನಚಿಂತನೆಯನ್ನು ಜ್ಯೋತಿಷ್ಯ ರತ್ನ ಪೈಯನ್ನೂರು ಗೋಪಾಲಕೃಷ್ಣ ಪಣಿಕರವರ ಸಾರಥ್ಯದಲ್ಲಿ ತಾಂಬೂಲ ಪ್ರಶ್ನೆಯನ್ನು ಕ್ಷೇತ್ರದ ಸಾನಿಧ್ಯದಲ್ಲಿ ಇರಿಸಲಾಗಿತ್ತು. ಪ್ರಶ್ನೆಯಲ್ಲಿ ಶ್ರೀ ದೈವಗಳ ಪೂರ್ವಪರದ ಬಗ್ಗೆ ಚಿಂತನೆ ಮಾಡಲಾಯಿತು. ಶ್ರೀ ದೈವಗಳ ಮೂಲಸ್ಥಾನವಾದ ಪಾವೂರು ಬಲ್ಲೂರಿನ ಸ್ಥಳದಲ್ಲಿರುವ ಕಲ್ಲಿನಲ್ಲಿ ಶ್ರೀದೈವಗಳ ಶಕ್ತಿ ಇದ್ದು ಅದು ಬೋಳದಪದವಿಗೆ ಬರುವಾಗ ಆ ಶಕ್ತಿ ಆಕರ್ಷಣೆಗೆ ಒಳಗಾಗಲಿಲ್ಲ. ಆದ್ದರಿಂದ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರತಿಷ್ಠಾಪಿಸಬೇಕೆಂದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿರುತ್ತದೆ .ಅಲ್ಲದೆ ಕ್ಷೇತ್ರಕ್ಕೆ ಸಂಬಂಧಪಟ್ಟ ಅಭಿವೃದ್ಧಿ ಕೆಲಸಗಳು ಮುಂದುವರಿಸುವ ಬಗ್ಗೆ ಉತ್ತಮವಾದ ಪ್ರತಿಕ್ರಿಯೆಗಳು ಚಿಂತನೆಯಲ್ಲಿ ಕಂಡುಬಂದಿರುತ್ತದೆ. ನಿವೃತ್ತಿ ರಾಶಿಯಲ್ಲಿಯೂ ಉತ್ತಮವಾದ ಪ್ರಕ್ರಿಯೆಗಳು ಗೋಚರಿಸಿವೆ. ಮೊದಲಾಗಿ ಗ್ರಾಮ ದೇವಸ್ಥಾನವಾದ ವರ್ಕಾಡಿ ಕಾವೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬೋಳದಪದವಿನ ಹಿರಿಯರ ಕೆಲವು ತಪ್ಪು ನಿರ್ಧಾರಗಳಿಗೆ ಪ್ರಾಯಶ್ಚಿತವಾಗಿ ಮುಷ್ಟಿ ಕಾಣಿಕೆ, ದೀಪ ಸಮರ್ಪಿಸುವಂತೆ ನಿವೃತ್ತಿ ರಾಶಿಯಲ್ಲಿ ಕಂಡುಬಂದಿರುತ್ತದೆ, ಅದರಂತೆ ಇದೇ ತಿಂಗಳ 5 ರಂದು ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ವರ್ಕಾಡಿ ಕಾವಿಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬೋಳದಪದವಿನ ಸಮಾಜ ಬಾಂಧವರು, ಊರಿನ ಪ್ರಮುಖರು, ಬ್ರಹ್ಮ ಮುಗೇರ ಸೇವಾ ಸಮಿತಿ ಹಾಗೂ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ತೆರಳಿ ಕಾವೀ ಕ್ಷೇತ್ರದಲ್ಲಿ ಮುಷ್ಟಿ ಕಾಣಿಕೆ, ಹಾಗೂ ದೀಪ ಸಮರ್ಪಿಸುವ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕೆಂದು ದ್ವಿ - ಸಮಿತಿಯ ಅಧ್ಯಕ್ಷರು ಗ್ರಾಮಸ್ಥರಿಗೆ ಹಾಗೂ ಭಕ್ತರಿಗೆ ಮನವಿ ಮಾಡಿರುತ್ತಾರೆ.





