ಮಂಜೇಶ್ವರ ರೈಲ್ವೇ ಪ್ರಯಾಣದ ಸಂಕಷ್ಟವನ್ನು ಪರಿಹರಿಸಿ ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಎ.ಐ.ಟಿ.ಯು.ಸಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲು ನಿಲ್ದಾಣಕ್ಕೆ ಮಾರ್ಚ್ ಮತ್ತು ಧರಣಿ.
ನವೆಂಬರ್ 14, 2023
0
ಮಂಜೇಶ್ವರ ರೈಲ್ವೇ ಪ್ರಯಾಣದ ಸಂಕಷ್ಟವನ್ನು ಪರಿಹರಿಸಿ ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಎ.ಐ.ಟಿ.ಯು.ಸಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲು ನಿಲ್ದಾಣಕ್ಕೆ ಮಾರ್ಚ್ ಮತ್ತು ಧರಣಿ.
ಮಂಜೇಶ್ವರ: ಮಂಜೇಶ್ವರ ರೈಲ್ವೇ ಪ್ರಯಾಣದ ಸಂಕಷ್ಟವನ್ನು ಪರಿಹರಿಸಿ. ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಎ.ಐ.ಟಿ.ಯು.ಸಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲು ನಿಲ್ದಾಣ ಮಾರ್ಚ್ ಮತ್ತು ಧರಣಿ ಇಂದು ಬೆಳಗ್ಗೆ ನಡೆಯಿತು. ಧರಣಿಯನ್ನು A.I.T.U.C ಜಿಲ್ಲಾ ಅಧ್ಯಕ್ಷರಾದ ಟಿ.ಕೃಷ್ಣನ್ ಉದ್ಘಾಟಿಸಿದರು. ಎಸ್. ರಾಮಚಂದ್ರ ಬಡಾಜೆ ಅಧ್ಯಕ್ಷತೆ ವಹಿಸಿದರು. A.I.T.U.C ಜಿಲ್ಲಾ ಕೋಶಾಧಿಕಾರಿ ಬಿ.ವಿ ರಾಜನ್, K.C.E.C - A.I.T.U.C ರಾಜ್ಯ ಕಾರ್ಯದರ್ಶಿ ಬಿ. ಸುಕುಮಾರನ್, ಕಟ್ಟಡ ನಿರ್ಮಾಣ ಯೂನಿಯನ್ ನೇತಾರ ರಾಮದಾಸ್ ಕಡಂಬಾರ್, ಮೋಟಾರ್ ಯೂನಿಯನ್ (AITUC) ಜಿಲ್ಲಾ ಅಧ್ಯಕ್ಷ ಮುಸ್ತಫಾ ಕಡಂಬಾರ್, ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್, A.I.Y.F ಜಿಲ್ಲಾ ಉಪಾಧ್ಯಕ್ಷ ಹರೀಶ್ ಕೆ.ಆರ್ ಮೊದಲಾದವರು ಮಾತನಾಡಿದರು. ಶ್ರೀಧರ್ ಮಾಡ, ಚಂದ್ರಶೇಖರ್, ಯತೀಶ್ ಬಿ.ಎಂ, ರಮೇಶ್ ಉದ್ಯಾವರ, ಪ್ರದೀಶ್ ಬಡಾಜೆ, ಧನು ರಾಜ್ ಕೀರ್ತೇಶ್ವರ, ನಾರಾಯಣ ಕಾಜೂರ್, ಗಣೇಶ್ ಕುಂಜತ್ತೂರ್, ಮಹಿಳಾ ನೇತಾರರಾದ ರೋಶಿನಿ ಜಯರಾಮ್, ವನಿತಾ ರಮೇಶ್, ಶೋಭಾ, ರೇಖಾ ಮಣಿ ಮೊದಲಾದವರು ಉಪಸ್ಥಿತರಿದ್ದರು. ಗಂಗಾಧರ್ ಕೊಡ್ಡೆ ಸ್ವಾಗತಿಸಿ, ದಯಾಕರ ಮಾಡ ವಂದಿಸಿದರು.




