ಮಂಜೇಶ್ವರ ಗಾಂಧಿ ನಗರ ನೇತಾಜಿ ಫ್ರೆಂಡ್ಸ್ ಕ್ಲಬ್ ನ ಆಶ್ರಯದಲ್ಲಿ ದೀಪಾವಳಿ "ಲಕ್ಷ್ಮೀ ಪೂಜಾ ಸಂಭ್ರಮ".
ನವೆಂಬರ್ 14, 2023
0
ಮಂಜೇಶ್ವರ ಗಾಂಧಿ ನಗರ ನೇತಾಜಿ ಫ್ರೆಂಡ್ಸ್ ಕ್ಲಬ್ ನ ಆಶ್ರಯದಲ್ಲಿ ದೀಪಾವಳಿ "ಲಕ್ಷ್ಮೀ ಪೂಜಾ ಸಂಭ್ರಮ".
ಮಂಜೇಶ್ವರ: ನೇತಾಜಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ ಮಂಜೇಶ್ವರ ಇದರ ನೇತೃತ್ವದಲ್ಲಿ ದೀಪಾವಳಿ ಹಬ್ಬವನ್ನು ಭಜನೆ, ಮಹಾಲಕ್ಷ್ಮೀ ಅಷ್ಟಕಂ ಸ್ತೋತ್ರ ಪಠಣ, ಲಕ್ಷ್ಮೀ ಪೂಜೆ ಹಾಗೂ ಸುಡುಮದ್ದು ಪ್ರದರ್ಶನದೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪಾಧಾಧಿಕಾರಿ ಯಶ್ ಪಾಲ್ ರವರು ದೀಪಾವಳಿ ಹಬ್ಬದ ಬಗ್ಗೆ ತಿಳಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಕ್ಲಬ್ಬಿನ
ಉಪಾಧ್ಯಕ್ಷರಾದ ಮಂಜುನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಸೈನಿಕ ಹಾಗೂ ಹಿರಿಯರಾದ ಕೃಷ್ಣಪ್ಪ ಅವರು ದೀಪಾವಳಿ ಶುಭಾಶಯಗಳನ್ನು ಹಂಚಿದರು. ಹಿರಿಯರಾದ ಶ್ರೀಮತಿ ವಿಮಲಾ ನಾರಾಯಣ್, ಗುರುದತ್ ಸಂಗಡಿಗರು ಭಜನಾ ಸಂಕೀರ್ತನೆ ನಡೆಸಿ ಕೊಟ್ಟರು. ಈ ವೇಳೆ ಕ್ಲಬ್ಬಿನ ಗೌರವ ಸಲಹೆಗಾರರಾದ ಚಂದ್ರಹಾಸ್ ಮಾನಿಂಜ , ಕಾರ್ಯದರ್ಶಿಯಾದ ತರುಣ್ ಬಂಗೇರ, ಜೊತೆ ಕಾರ್ಯದರ್ಶಿಯಾದ ದೀಪಕ್ ಶೆಟ್ಟಿಗಾರ್, ಕೋಶಾಧಿಕಾರಿಯಾದ ಭರತ್ ರಾಜ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಸುಕೇಶ್ ಆಳ್ವ ಧನ್ಯವಾದವಿತ್ತರು.







