ರೈತ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪೈವಳಿಕೆಯಲ್ಲಿ ಕರಿದಿನ ಸಮರ.
ಅಕ್ಟೋಬರ್ 05, 2023
0
ರೈತ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪೈವಳಿಕೆಯಲ್ಲಿ ಕರಿದಿನ ಸಮರ.
ಮಂಜೇಶ್ವರ: C.I.T.U, A.I.K.S, K.S.K.T.U ನೇತೃತ್ವದಲ್ಲಿ ಸಂಯುಕ್ತವಾಗಿ 2021 ಒಕ್ಟೋಬರ್ 3 ರಂದು ಕೇಂದ್ರಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಪಾರ್ಲಿಮೆಂಟ್ ಎದುರುಗಡೆ ರೈತರು ನಡೆಸಿದ ಐತಿಹಾಸಿಕ ಹೋರಾಟಕ್ಕೆ ಬೆಂಬಲಿಸಿ ಉತ್ತರಪ್ರದೇಶದ ಲಿಕಮ್ ಪುರ್ ಕೇರಿಯಲ್ಲಿ ನಡೆದ ರೈತರ ರ್ಯಾಲಿಗೆ ಕೇಂದ್ರ ಮಂತ್ರಿ ಅಜಯ್ ಮಿಶ್ರ ತೇನಿ ಎಂಬವರ ಮಗ ಆಶಿಶ್ ಮಿಶ್ರ ಕಾರು ಚಲಾಯಿಸಿದ ಪರಿಣಾಮವಾಗಿ 5 ರೈತರು ದಾರುಣವಾಗಿ ಹತ್ಯೆ ಯಾದರು ಈ ಘಟನೆ ನಡೆದು 2 ವರ್ಷ ಕಳೆದರು ಯಾವುದೇ ಕ್ರಮಕೈಗೊಳ್ಳದ ಕೇಂದ್ರ ಸರ್ಕಾರದ ಜನವಿರೋಧಿ ರೈತ ವಿರೋಧಿ ನೀತಿಯನ್ನು ವಿರೋಧಿಸಿ, ರೈತ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪೈವಳಿಕೆಯಲ್ಲಿ ಕರಿದಿನ ಸಮರ ನಡೆಯಿತು. A.I.K.S ರಾಜ್ಯಸಮಿತಿ ಸದಸ್ಯರಾದ ಕೆ. ಆರ್ ಜಯನಂದ ಉದ್ಘಾಟಿಸಿ, ಮಾತನಾಡಿದರು. ಕಾಂ. ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೇತಾರರಾದ ಬಾಳಪ್ಪ ಬಂಗೇರ, ಅಶೋಕ ಬಂಡಾರಿ, ಅಬ್ದುಲ್ ರಝಾಕ್ ಚಿಪ್ಪಾರ್, ಅಬ್ದುಲ್ಲಾ .ಕೆ, ಕಮಲಾಕ್ಷ ಡಿ, ಪುರುಷೋತ್ತಮ ಬಳ್ಳುರು, ರಾಮಚಂದ್ರ ಟಿ, ಪ್ರಶಾಂತ್ ಕನಿಲ ಮೊದಲಾದವರು ಮಾತನಾಡಿದರು. ನಾರಾಯಣ ಶೆಟ್ಟಿ ಸ್ವಾಗತಿಸಿದರು.
