ಮಂಜೇಶ್ವರ ಗ್ರಾಮ ಪಂಚಾಯತ್ ಕುಟುಂಬಶ್ರೀ ಸಿ.ಡಿ.ಯಸ್ ನ ವತಿಯಿಂದ "ಮರಳಿ ಶಾಲೆಗೆ " ಕಾರ್ಯಕ್ರಮ.
ಅಕ್ಟೋಬರ್ 05, 2023
0
ಮಂಜೇಶ್ವರ ಗ್ರಾಮ ಪಂಚಾಯತ್ ಕುಟುಂಬಶ್ರೀ ಸಿ.ಡಿ.ಯಸ್ ನ ವತಿಯಿಂದ "ಮರಳಿ ಶಾಲೆಗೆ " ಕಾರ್ಯಕ್ರಮ.
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ಕುಟುಂಬಶ್ರೀ ಸಿ.ಡಿ.ಯಸ್ ನ ವತಿಯಿಂದ "ಮರಳಿ ಶಾಲೆಗೆ " ಎಂಬ ಕಾರ್ಯಕ್ರಮವು 6 ವಾರ್ಡಿನ ಕುಟುಂಬ ಶ್ರೀ ಸದಸ್ಯೆಯರನ್ನು ಒಗ್ಗೂಡಿಸಿಕೊಂಡು ಕುಂಜತ್ತೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ. ಜಯಶ್ರೀ ಸಿ. ಡಿ. ಯಸ್. ಚಯರ್ ಪರ್ಸನ್ ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೊಹಮ್ಮದ್ ಸಿದ್ದಿಕ್, ಹಾಗೂ ಇತರ ವಾರ್ಡಿನ ಸದಸ್ಯರುಗಳಾದ. ವಿನಯ ಭಾಸ್ಕರ್, ರಾಜೇಶ್, ಕುಲ್ಸುಮ್ಮಾ, ರೇಖಾ, ಅಬ್ದುಲ್ ರಹಮಾನ್, ಲಕ್ಶ್ಮಣ ಕುಚ್ಚಿಕ್ಕಾಡ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಿ. ಡಿ.ಯಸ್. ಮೆಂಬರ್, ಅಕೌಂಟೆಂಟ್, ಸಪೋರ್ಟಿಂಗ್ ಸ್ಟಾಫ್, ಆರ್. ಪಿ ಯವರು ಬೆಳಗ್ಗೆ 9.30 ರಿಂದ ಸಂಜೆ 4:30 ರ ವರೆಗೆ ಕುಟುಂಬಶ್ರೀ ಯ 5 ಪಾಠಗಳೊಂದಿಗೆ ತರಗತಿ ನಡೆಸಿದರು.

