ಮಂಗಲ್ಪಾಡಿ ಸರಕಾರಿ ಹೈಸ್ಕೂಲ್ ನ 1988 ರ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳಿಂದ "ಗೆಟ್ ಟು ಗೆದರ್".
ಅಕ್ಟೋಬರ್ 05, 2023
0
ಮಂಗಲ್ಪಾಡಿ ಸರಕಾರಿ ಹೈಸ್ಕೂಲ್ ನ 1988 ರ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳಿಂದ "ಗೆಟ್ ಟು ಗೆದರ್".
ಮಂಜೇಶ್ವರ: ಮಂಗಲ್ಪಾಡಿ ಸರಕಾರಿ ಹೈಸ್ಕೂಲ್ ನ 1988 ರ ಎಸ್. ಎಸ್. ಎಲ್. ಸಿ ಬ್ಯಾಚ್ ನ ವತಿಯಿಂದ "ಗೆಟ್ ಟುಗೆದರ್" ಕಾರ್ಯಕ್ರಮ ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಸುಮಾರು 32 ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ ಕಲಿತ ಹಳೆ ವಿದ್ಯಾರ್ಥಿಗಳು ವಿದೇಶ ಹಾಗೂ ಸ್ವ - ದೇಶದಲ್ಲಿದ್ದರೂ, ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತಾವು ಕಲಿತ ಶಾಲೆಗೆ ಆಗಮಿಸಿ, ಸಹಪಾಠಿಗಳ ಜೊತೆ ಸಂಭ್ರಮಿಸಿ, ಅಂದಿನ ಶಾಲಾ ಅನುಭವಗಳನ್ನು ಮೆಲುಕು ಹಾಕುತ್ತಾ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಸಂತಸಪಟ್ಟರು. ಹಳೆ ವಿದ್ಯಾರ್ಥಿಗಳಾದ ದೀಪಕ್ ರಾಜ್ ಉಪ್ಪಳ, ರಾಜಕುಮಾರ್ ಮತ್ತು ಫ್ಯಾಮಿಲಿ ಪೆರಿಂಗಡಿ, ಯುಕ್ತ ಉಡುಪಿ, ಹರೀಶ್ಚಂದ್ರ ಬೇರಿಕೆ, ಸುಜಯ ಬೆಂಗಳೂರು ಧನಲಕ್ಷ್ಮಿ ಐಲ, ದಿನಕರ ಮತ್ತು ಫ್ಯಾಮಿಲಿ ಬೇರಿಕೆ, ನವೀನ್ ಬೇರಿಕೆ, ದಾಕ್ಷಾಯಿಣಿ ಮತ್ತು ಫ್ಯಾಮಿಲಿ ಕಾಸರಗೋಡು, ಮುಸ್ಟರಿ ಮತ್ತು ಫ್ಯಾಮಿಲಿ, ರೇವತಿ ಚಿರುಗೋಳಿ, ಮೋಹನ್ ರೈ ಉಪ್ಪಳ, ಇಬ್ರಾಹಿಂ ಖಾದರ್ (ಜಾಕಿ) ಬಪ್ಪಾಯಿತೊಟ್ಟಿ, ಇಸ್ಮಾಯಿಲ್ ಬಪ್ಪಾಯಿತೊಟ್ಟಿ, ಕಿಶನ್ ಚಿರುಗೋಳಿ, ಸತ್ಯನಾರಾಯಣ ಮಾಸ್ಟರ್ ಐಲ ಮೈದಾನ್, ಮುನ್ನಪ್ ಬಪ್ಪಾಯಿತೊಟ್ಟಿ, ರೇವತಿ ಮಂಗಳೂರು ಸೇರಿದಂತೆ ಅನೇಕರು ಪಾಲ್ಗೊಂಡರು. ಹಳೆ ವಿದ್ಯಾರ್ಥಿಗಳ ಪೈಕಿ ಅಧ್ಯಾಪಕ ವೃತ್ತಿಯಲ್ಲಿರುವ ಮಂಗಲ್ಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಇದೀಗ ಬೇರೊಂದು ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಮಾಡುತ್ತಿರುವ ಮೋಹನ್ ರೈ ಹಾಗೂ ಪ್ರಸ್ತುತ ಶಾಲಾ ಚಿತ್ರಕಲಾ ಅಧ್ಯಾಪಕರಾಗಿರುವ ಸತ್ಯನಾರಾಯಣ ಮಾಸ್ಟರ್ ಐಲ ಇವರನ್ನು ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ರಾಜ್ ಕುಮಾರ್ ಪೆರಿಂಗಡಿ ನಿಶ್ಕ್ರಿಯಗೊಂಡ ಹಳೆಯ ನೆಟ್, ಬೋಲ್ಟ್ ಹಾಗೂ ಬೇರಿಂಗ್ ನಿಂದ ತಯಾರಿಸಿದ ಬೈಕ್ ಹಾಗೂ ಇನ್ನಿತರ ವಾಹನಗಳನ್ನು ಪ್ರದರ್ಶಿಸಿದರು. ಹಳೆ ವಿದ್ಯಾರ್ಥಿ ಸತ್ಯನಾರಾಯಣ ಮಾಸ್ಟರ್ ಐಲ ಇವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯಿತು. ಬಳಿಕ ಶಾಲಾ ಪರಿಸರದಲ್ಲಿ ಹಬ್ಬಿದ ಕಾಡು ಪೊದೆಗಳನ್ನು, ಹುಲ್ಲುಗಳನ್ನು ಕೀಳಿ ಸ್ವಚ್ಚ ಮಾಡಲಾಯಿತು. ವಿವಿಧ ಒಳಾಂಗಣ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಕೊನೆಗೆ ಎಲ್ಲರೂ ಕುಶಿಗೊಂಡು ತಮ್ಮ ತಮ್ಮ ಮನದಾಳದ ಮಾತುಗಳನ್ನಾಡಿ ಸಂತಸಗೊಂಡರು.












