Breaking Posts

6/trending/recent
Type Here to Get Search Results !

8:10:45

ಕೋಟೆಕಾರು ನೆಲ್ಲಿಸ್ಥಳ ನಿವಾಸಿ ಕೆ.ಎನ್. ಯಾದವ ಆಚಾರ್ಯ ನಿಧನ.

ಕೋಟೆಕಾರು ನೆಲ್ಲಿಸ್ಥಳ ನಿವಾಸಿ ಕೆ.ಎನ್. ಯಾದವ ಆಚಾರ್ಯ ನಿಧನ.
ಕೋಟೆಕಾರು: ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನ ಬಳಿಯ ನಿವಾಸಿ ದಿ. ದೇವಪ್ಪಾಚಾರ್ಯ ದಿ.ಪದ್ಮಾವತಿ ದಂಪತಿಯ ಪುತ್ರ ಕೆ. ಎನ್. ಯಾದವ ಆಚಾರ್ಯ (64) ಅಲ್ಪಕಾಲದ ಅಸೌಕ್ಯದಿಂದ ಬಳಲುತ್ತಿದ್ದು, ಕಳೆದ 10 ದಿನಗಳ ಹಿಂದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಮಧ್ಯಾಹ್ನ 2:30 ಗಂಟೆಗೆ ನಿಧನರಾದರು. ಮೃತರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ 11 ಗಂಟೆಗೆ ಮಾಡೂರು ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ನಡೆಯಲಿದೆ.
ಮೃತರು ಈ ಮೊದಲು ತೊಕ್ಕೋಟಿನಲ್ಲಿ "ಅಂಜಲಿ ಮೊಬೈಲ್ ರಿಚಾರ್ಜ್ ಸರ್ವಿಸ್ ಸೆಂಟರ್" ಸಂಸ್ಥೆಯನ್ನು ಹೊಂದಿದ್ದರು. ಬಳಿಕ ಮನೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದರು. ಮೃತರ ಪತ್ನಿ ಅಂಬಿಕಾ, ಮಕ್ಕಳಾದ ಜ್ಞಾನದೇವ ಆಚಾರ್ಯ, ಸಾನುದೇವ ಆಚಾರ್ಯ, ಸೊಸೆ ಮಾಲಾಶ್ರೀ ಹಾಗೂ ಸಹೋದರ - ಸಹೋದರಿಯರನ್ನು ಅಗಲಿದ್ದಾರೆ. ಮೃತರ ಏಕ ಪುತ್ರಿ ಗೀತಾಂಜಲಿ ಹಲವು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮೃತರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿದ್ದರು. ಮೃತರ ನಿಧನಕ್ಕೆ ಕ್ಷೇತ್ರದ ಆಡಳಿತ ಸಮಿತಿ, ಮಹಿಳಾ ಸಮಿತಿ, ಸೇವಾ ಸಂಘ ಹಾಗೂ ಕೋಟೆಕಾರಿನ ವಿಶ್ವಕರ್ಮ ಸಮಾಜ ಬಾಂಧವರು ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.