ರಘು ಭಟ್ ಮಂಜೇಶ್ವರ ಹಾಗೂ ಲಕ್ಷ್ಮಣ್ ಭಕ್ತ ಮಂಜೇಶ್ವರ ಸಮಗ್ರ ಸಾರಥ್ಯದಲ್ಲಿ 24 ರಂದು ಸಂಜೆ 7 ಕ್ಕೆ "ಮಂಜೇಶ್ವರ ದಸರಾ 2023" ಅದ್ದೂರಿ ಕಾರ್ಯಕ್ರಮ.
ಅಕ್ಟೋಬರ್ 22, 2023
0
ರಘು ಭಟ್ ಮಂಜೇಶ್ವರ ಹಾಗೂ ಲಕ್ಷ್ಮಣ್ ಭಕ್ತ ಮಂಜೇಶ್ವರ ಸಮಗ್ರ ಸಾರಥ್ಯದಲ್ಲಿ 24 ರಂದು ಸಂಜೆ 7 ಕ್ಕೆ "ಮಂಜೇಶ್ವರ ದಸರಾ 2023" ಅದ್ದೂರಿ ಕಾರ್ಯಕ್ರಮ.
ಮಂಜೇಶ್ವರ: ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮಂಜೇಶ್ವರದ ರಥ ಬೀದಿಯಲ್ಲಿ ನಡೆಯುತ್ತಿರುವ 66 ನೇ ವರ್ಷದ ಮಂಜೇಶ್ವರ ಶಾರದೋತ್ಸವದ ಶೋಭಾಯಾತ್ರೆಯ ವೇಳೆ ಈ ತಿಂಗಳ 24 ರಂದು ಸಂಜೆ 7 ರಿಂದ ಮಂಜೇಶ್ವರದ ಹೊಸಬೆಟ್ಟು ರಿಜಿಸ್ತ್ರೀ ಕಚೇರಿ ಬಳಿ ಹಾಕಿರುವ ಭವ್ಯ ವೇದಿಕೆಯಲ್ಲಿ ನಟ, ನಿರ್ಮಾಪಕ, ರಘುಭಟ್ ಮಂಜೇಶ್ವರ ಮತ್ತು ಧಾರ್ಮಿಕ ಮುಂದಾಳು ಲಕ್ಷ್ಮಣ ಭಕ್ತ ಮಂಜೇಶ್ವರವರ ಸಮಗ್ರ ಸಾರಥ್ಯದಲ್ಲಿ ಐತಿಹಾಸಿಕ ಮಂಜೇಶ್ವರ ದಸರಾ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದೆ. ಪ್ರತೀ ವರ್ಷದಂತೆ ಈ ವರ್ಷ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ಪತ್ರಕರ್ತ ರಮಾಕಾಂತ್, ಚಲನಚಿತ್ರ ನಟ ಶರತ್ ಲೋಹಿತಾಶ್ವ, ನಟಿಶಿಲ್ಪಾ ಐಯ್ಯರ್, ಪ್ರಿಯಾಂಕ, ಬಿಗ್ ಬಾಸ್ ವಿನ್ನರ್, ಒಳ್ಳೆ ಹುಡುಗ ಎಂದೇ ಖ್ಯಾತಿ ಪಡೆದಿರುವ ನಟ, ನಿರ್ದೇಶಕರಾಗಿರುವ ಪ್ರಥಮ್ ಬೆಂಗಳೂರು, ಹೃದ್ರೋಗ ತಜ್ಞ ಡಾಕ್ಟರ್ ನರಸಿಂಹ ಪೈ, ಸ್ಪೋರ್ಟ್ಸ್ ಪರ್ಸನ್, ಕ್ರಿಕೆಟ್ ಕೋಚರ್ ಸುನೀಲ್ ಕುಮಾರ್, ಕರ್ನಾಟಕ ವಿಧಾನ ಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ ಖಾದರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕಲರ್ಸ್ ಡ್ಯಾನ್ಸ್ ಟೀಮ್ ಬೆಂಗಳೂರು ಇವರಿಂದ ಅಮೋಘ ನೃತ್ಯ ಪ್ರದರ್ಶನ ನಡೆಯಲಿದೆ. ಈ ವೈಭವದ ಮಂಜೇಶ್ವರ ದಸರಾ ಕಾರ್ಯಕ್ರಮದಲ್ಲಿ ತಾವೆಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನ ಯಶಸ್ವಿಗೊಳಿಸಿ ಕೊಡಬೇಕಾಗಿ ನಟ, ನಿರ್ಮಾಪಕ ರಘು ಭಟ್ ಮಂಜೇಶ್ವರ ಹಾಗೂ ಧಾರ್ಮಿಕ ಮುಂದಾಳು ಲಕ್ಷ್ಮಣ ಭಕ್ತ ಮಂಜೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










