ಪಿ.ಬಿ.ಅಬ್ದುಲ್ ರಜಾಕ್ ಅವರು ಜನರ ಹೃದಯವನ್ನು ಅರಿತು ಸೇವೆ ಮಾಡಿದ ನಾಯಕ: ಸಿ.ಟಿ.ಅಹಮ್ಮದಲಿ
ಅಕ್ಟೋಬರ್ 21, 2023
0
ಪಿ.ಬಿ.ಅಬ್ದುಲ್ ರಜಾಕ್ ಅವರು ಜನರ ಹೃದಯವನ್ನು ಅರಿತು ಸೇವೆ ಮಾಡಿದ ನಾಯಕ: ಸಿ.ಟಿ.ಅಹಮ್ಮದಲಿ
ಉಪ್ಪಳ: ಮುಸ್ಲಿಮ್ ಲೀಗ್ ಮುಖಂಡರೂ, ಮಂಜೇಶ್ವರ ಶಾಸಕರಾಗಿದ್ದ ಪಿ.ಬಿ.ಅಬ್ದುಲ್ ರಝಾಕ್ ಜನಮನವನ್ನು ಅರಿತು ಸೇವೆ ಮಾಡಿದ ನಾಯಕರಾಗಿದ್ದರೆಂದು ಮುಸ್ಲಿಂ ಲೀಗ್ ಕೇರಳ ರಾಜ್ಯ ಕೋಶಾಧಿಕಾರಿ ಸಿ.ಟಿ. ಅಹಮ್ಮದಲಿ ನುಡಿದರು. ಅವರು ಮುಸ್ಲಿಮ್ ಲೀಗ್ ಮಂಜೇಶ್ವರ ಮಂಡಲ ಸಮಿತಿ ಆಯೋಜಿಸಿದ ಪ್ರಾರ್ಥನಾ ಸಭೆ ಮತ್ತು ಅನುಸ್ಮರಣಾ ಸಭೆಯನ್ನು ಉಪ್ಪಳ ಸಿ.ಎಚ್. ಸೆಂಟರಿನಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮಾತನ್ನು ಮುಂದುವರೆಸಿ, ರದ್ದುಚ್ಚ ಎಂದು ಜನರು ಪ್ರೀತಿಯಿಂದ ಕರೆದ ಪಿ.ಬಿ.ಯವರು ಸಜ್ಜನಿಕೆ ಮತ್ತು ಸರಳತೆಯಿಂದ ಸಾರ್ವಜನಿಕ ಜೀವನವನ್ನು ನಡೆಸಿದವರು, ಕರುಣೆಯ ಮಹಾವೃಕ್ಷವಾಗಿದ್ದ. ಅವರು ಯಾವಾಗಲೂ ನಿರ್ಗತಿಕರಿಗೆ ಮತ್ತು ಬಡವರಿಗೆ ಬೆಂಬಲ ನೀಡುತ್ತಿದ್ದರು. ಮತ್ತು ಸಮಾಜದಲ್ಲಿ ಸಮಾನವಾಗಿ ಸ್ವೀಕರಿಸಲ್ಪಟ್ಟರು ಎಂದು ಹೇಳಿದರು. ಮುಸ್ಲಿಂ ಲೀಗ್ ಮಂಡಲ ಅಧ್ಯಕ್ಷ ಅಜೀಜ್ ಮೆರಿಕೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎ. ಕೆ ಆರಿಫ್ ಸ್ವಾಗತಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅನುಸ್ಮರಣಾ ಭಾಷಣ ಮಾಡಿದರು. ಜಿಲ್ಲಾ ಮುಸ್ಲಿಂ ಲೀಗ್ ವೈ: ಅಧ್ಯಕ್ಷ ಟಿ.ಎ ಮೂಸಾ, ಎಂ.ಬಿ ಯೂಸುಫ್ ಹಾಜಿ, ಕಾರ್ಯದರ್ಶಿಗಳಾದ ಎಂ.ಅಬ್ಬಾಸ್, ಹಾರಿಸ್ ಚೂರಿ, ಘಟಕದ ಪದಾಧಿಕಾರಿಗಳಾದ ಸೈಯದ್ ಹಾದಿ ತಂಗಳ್, ಅಬ್ದುಲ್ಲಾ ಮಾದೇರಿ, ಅಂಮುಂಜಿ ಹಾಜಿ ಚಿಪ್ಪಾರ್, ಎಂ.ಪಿ.ಖಾಲಿದ್ .ಟಿಎಂ. ಶುಹೈಬ್, ಸಿದ್ದೀಕ್ ಒಳಮುಗರ, ಎ.ಕೆ.ಖಾಲಿದ್ ದುರ್ಗಿಪಳ್ಳ, ಅನೀಸ್ ಕಳತ್ತೂರು, ಬಿ.ಎಂ.ಮುಸ್ತಫಾ, ಅಯ್ಯೂಬ್ ಉರುಮಿ, ಡೆಡ್.ಎ ಮೊಗ್ರಾಲ್, ಮುಮ್ತಾಜ್ ಸಮೀರ, ನಮೀಝ್ ಕೂಡು ಕೋಟಿ, ಗಫೂರ್ ಏರಿಯಲ್, ಶರೀಫ್ ಉರುಮಿ, ಎಂ ಅಬ್ದುಲ್ಲಾ ಮುಗು, ಅನ್ಸಾರ್ ವರ್ಕಾಡಿ, ಹಮೀದ್ ಕಲ್ಲಿಲ್ ಕುನದಿನ್, ಕಲ್ಲಿಲ್ ಕುನದಿನ್, ಬಿ.ಎಂ. ಮಸ್ತಫ ಮೊದಲಾದವರು ಮಾತನಾಡಿದರು. ಕೋಶಾಧಿಕಾರಿ ಯು.ಕೆ.ಸೈಫುಲ್ಲಾ ತಂಗಳ್ ಧನ್ಯವಾದವಿತ್ತರು.


