ವರ್ಕಾಡಿಯಲ್ಲಿ ಕೇರಳೋತ್ಸವವಿಲ್ಲ. ಯುವಜನತೆಗೆ ಎಡರಂಗದಿಂದ ವಂಚನೆ. ಅನ್ಸಾರ್ ವರ್ಕಾಡಿ ಆರೋಪ.
ಅಕ್ಟೋಬರ್ 21, 2023
0
ವರ್ಕಾಡಿಯಲ್ಲಿ ಕೇರಳೋತ್ಸವವಿಲ್ಲ. ಯುವಜನತೆಗೆ ಎಡರಂಗದಿಂದ ವಂಚನೆ. ಅನ್ಸಾರ್ ವರ್ಕಾಡಿ ಆರೋಪ.
ವರ್ಕಾಡಿ: ವರ್ಕಾಡಿ ಗ್ರಾಮ ಪಂಚಾಯತು ಕೇರಳೋತ್ಸವ ನಡೆಸದೆ ಯುವಕರನ್ನು ಕಲಾ - ಕ್ರೀಡಾ ಶ್ರೇಷ್ಠತೆಯನ್ನು ಪೋಷಿಸಲು ಅವಕಾಶವನ್ನು ನೀಡದೆ ವಂಚಿಸಿದೆ,
ಕೇರಳದ ಎಲ್ಲಾ ಪಂಚಾಯತುಗಳಲ್ಲಿ ಕೇರಳೋತ್ಸವ ಪಂಚಾಯತು ಮಟ್ಟದಲ್ಲಿ ನಡೆಸಿ ಬ್ಲೋಕ್ ಪಂಚಾಯತ್ ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ವರ್ಕಾಡಿಯಲ್ಲಿ ಸ್ಪರ್ಧೆ ನಡೆಸದೇ, ಕಳೆದ ವರ್ಷದ ಸ್ಪರ್ಧಾ ವಿಜೇತರನ್ನು ಬ್ಲೋಕ್ ಮಟ್ಟದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇದು ಸರಿಯಲ್ಲ, ವರ್ಕಾಡಿಯ ಯುವಕರಲ್ಲಿ ಎಡರಂಗ ಆಡಳಿತ ಮಾಡುವ ದೊಡ್ಡ ವಂಚನೆ ಎಂದುಎಂ.ಎಸ್.ಎಫ್ ಮಂಜೇಶ್ವರ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಅನ್ಸಾರ್ ವರ್ಕಾಡಿ ಆರೋಪಿಸಿದ್ದಾರೆ. ವರ್ಕಾಡಿ ಪಂಚಾಯತು ಕೇರಳೋತ್ಸವ ಮಾಡಲು ಅಸಮರ್ಥವಾಗಿರುವಾಗ ಇಲ್ಲಿನ ಅಭಿವೃದ್ಧಿ ಹೇಗಿರಬಹುದೆಂದು ವರ್ಕಾಡಿ ಜನತೆಗೆ ಮನದಟ್ಟಾಗಿದೆ. ಬ್ಲಾಕ್ ಕೇರಳೋತ್ಸವದಲ್ಲಿ ವರ್ಕಾಡಿ ಪಂಚಾಯತು ಅಧ್ಯಕ್ಷೆ ಕೊಟ್ಟ "ಚೀಟಿ ವಿಜೇತರ ಪಟ್ಟಿ" ಯನ್ನು ಒಳಪಡಿಸಿದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಅನ್ಸಾರ್ ವರ್ಕಾಡಿ ಎಚ್ಚರಿಸಿದ್ದಾರೆ.


