Breaking Posts

6/trending/recent
Type Here to Get Search Results !

8:10:45

ನಿತ್ಯ ವ್ಯಾಯಾಮವು ದೇಹದ ರಕ್ತ ಚಲನೆ, ಆರೋಗ್ಯ ಸಂರಕ್ಷಣೆಗೆ, ಮಾನಸಿಕ ಕ್ಲೇಶ ನಿವಾರಣೆಗೆ ಸೂಕ್ತ. ಹೊಸಂಗಡಿ ವ್ಯಾಯಾಮ ಶಾಲೆಯು ಪ್ರತೀ ವರ್ಷ ವ್ಯಾಯಮ ಸಾಧನಗಳಿಗೆ ಆಯುಧ ಪೂಜೆಗೈಯುವ ಮೂಲಕ ಧರ್ಮ ಜಾಗೃತಿ ಕಾರ್ಯ ಮಾಡುತ್ತಿದೆ" - ಕೇಶವ ಕನಿಲ.

ನಿತ್ಯ ವ್ಯಾಯಾಮವು ದೇಹದ ರಕ್ತ ಚಲನೆ, ಆರೋಗ್ಯ ಸಂರಕ್ಷಣೆಗೆ, ಮಾನಸಿಕ ಕ್ಲೇಶ ನಿವಾರಣೆಗೆ ಸೂಕ್ತ. ಹೊಸಂಗಡಿ ವ್ಯಾಯಾಮ ಶಾಲೆಯು ಪ್ರತೀ ವರ್ಷ ವ್ಯಾಯಮ ಸಾಧನಗಳಿಗೆ ಆಯುಧ ಪೂಜೆಗೈಯುವ ಮೂಲಕ ಧರ್ಮ ಜಾಗೃತಿ ಕಾರ್ಯ ಮಾಡುತ್ತಿದೆ" - ಕೇಶವ ಕನಿಲ.
ಮಂಜೇಶ್ವರ: ಇಂದಿನ ಯುವಕರಿಗೆ ಆಧುನಿಕ ಸೌಲಭ್ಯವುಳ್ಳ ಜಿಮ್ ಗಳ ಅಗತ್ಯವಿದೆ. ಅದಕ್ಕಾಗಿ ವ್ಯಾಯಾಮ ಶಾಲೆಯ ಆಡಳಿತ ಸಮಿತಿ ವ್ಯವಸ್ಥಿತವಾಗಿ ಮೇಲ್ಛಾವಣಿಯಲ್ಲಿ ಕಾರ್ಯರೂಪಕ್ಕೆ ತಂದಿದೆ. ಇದನ್ನ ಇಂದಿನ ಯುವಕರು ಬಳಸಿಕೊಂಡು ವ್ಯಾಯಾಮವನ್ನು ಮಾಡುವ ಮೂಲಕ ದೇಹಾರೋಗ್ಯವನ್ನ ಸುಧಾರಿಸಬಹುದು. ಆಲ್ಲದೆ ನಿತ್ಯ ವ್ಯಾಯಾಮವು ದೇಹದ ರಕ್ತ ಚಲನೆ, ಆರೋಗ್ಯ ಸಂರಕ್ಷಣೆಗೆ, ಮಾನಸಿಕ ಕ್ಲೇಶ ನಿವಾರಣೆಗೆ ಸೂಕ್ತ ಎಂದು ಯುವ ಗಾಯಕ, ಪ್ರತಿಭಾ ಫೋಷಕ ಕಡಂಬಾರು ಇಂಚರ ಮೆಲೋಡೀಸ್ ನ ಸಂಸ್ಥಾಪಕರಾದ ಕೇಶವ ಕನಿಲರವರು ನುಡಿದರು. ಅವರು ಹೊಸಂಗಡಿ ಶ್ರೀ ಅಯ್ಯಪ್ಪ ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ
ನೂತನವಾಗಿ ಆಧುನಿಕ ಯುಗದ ತಂತ್ರಜ್ಞಾನಗಳಿಂದ ಆವಿಷ್ಕರಿಸಿದ ದೇಹಾರೋಗ್ಯಕ್ಕೆ ಸೂಕ್ತವಾದ ವ್ಯಾಯಾಮ ಸಾಧನಗಳು ಒಳಗೊಂಡ ಮಲ್ಟಿ ಜಿಮ್ ನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಬಳಿಕ ನೆರೆದ ಸಭಿಕರನ್ನುದ್ದೇಶಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ದೇಹದ ಪ್ರಖರತೆಗೆ ವ್ಯಾಯಾಮ ಮೂಲವಾಗಿದ್ದು, ಪ್ರತೀ ವರ್ಷದಂತೆ 'ಈ ವರ್ಷ ಹೊಸ ವ್ಯಾಯಾಮ ಸಾಧನಕ್ಕೆ' ಆಯುಧಪೂಜೆಗೈದು, ಧರ್ಮ ಜಾಗೃತಿ ಕಾರ್ಯವನ್ನು ಮಾಡುತ್ತಿರುವ ವ್ಯಾಯಾಮ ಶಾಲೆಯ ಕಾರ್ಯ ಪ್ರಸಂಶನೀಯ ಎಂದರು. ವ್ಯಾಯಮ ಶಾಲೆಯ ಅಧ್ಯಕ್ಷರಾದ ಕೆ. ನಾರಾಯಣ ಕನಿಲ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿಮ್ ಟ್ರೈನರ್ ಗೋಪಾಲಕೃಷ್ಣ ಶೆಟ್ಟಿ ಸೀತಾಂಗೋಳಿ, ಸದಾಶಿವ ಕೊಪ್ಪಳ, ವ್ಯಾಯಾಮ ಶಾಲೆಯ ಪಾಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಬಳಿಕ ವ್ಯಾಯಾಮ ಶಾಲೆಯ ಮುಂಭಾಗದಲ್ಲಿ ವಾಹನ ಪೂಜೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.