Breaking Posts

6/trending/recent
Type Here to Get Search Results !

8:10:45

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲ್ಲೂಕು, ಲಯನ್ಸ್ ಕ್ಲಬ್ ಮಂಜೇಶ್ವರ - ಉಪ್ಪಳ, ಶ್ರೀ ಭಾರತಿ ನೇತ್ರ ಚಿಕಿತ್ಸಾಲಯ ಕಾಸರಗೋಡು ಜಿಲ್ಲಾ ಅಂದತ್ವ ನಿವಾರಣ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲ್ಲೂಕು, ಲಯನ್ಸ್ ಕ್ಲಬ್ ಮಂಜೇಶ್ವರ - ಉಪ್ಪಳ, ಶ್ರೀ ಭಾರತಿ ನೇತ್ರ ಚಿಕಿತ್ಸಾಲಯ ಕಾಸರಗೋಡು ಜಿಲ್ಲಾ ಅಂದತ್ವ ನಿವಾರಣ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ.
ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲ್ಲೂಕು, ಲಯನ್ಸ್ ಕ್ಲಬ್ ಮಂಜೇಶ್ವರ - ಉಪ್ಪಳ, ಶ್ರೀ ಭಾರತಿ ನೇತ್ರ ಚಿಕಿತ್ಸಾಲಯ ಕಾಸರಗೋಡು ಜಿಲ್ಲಾ ಅಂದತ್ವ ನಿವಾರಣ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ತಲಪಾಡಿ ವಲಯದ ದುರ್ಗಾಪರಮೇಶ್ವರೀ ಜ್ಞಾನವಿಕಾಸ ಕೇಂದ್ರ ಮತ್ತು ಪ್ರಗತಿ ಬಂಧು ಸ್ವ - ಸಹಾಯ ಸಂಘಗಳ ಒಕ್ಕೂಟ ಉಪ್ಪಳ ಇದರ ಸಹಯೋಗದೊಂದಿಗೆ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃ ಶ್ರೀ ಡಾ. ಹೇಮಾವತಿ.ವಿ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರವು ಲಯನ್ಸ್ ಸೇವಾ ಮಂದಿರ ಉಪ್ಪಳ, ನಯಬಜಾರ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಲಕ್ಷ್ಮಣ್ ಕುಂಬಳೆ ಎಮ್. ಜೆ .ಎಫ್ ಅಧ್ಯಕ್ಷರು ಲಯನ್ಸ್ ಮಂಜೇಶ್ವರ ಇವರು ವಹಿಸಿದ್ದರು. ಗೋಪಾಲ ಶೆಟ್ಟಿ ಅರಿಬೈಲ್ ಸ್ಥಾಪಕ ಅಧ್ಯಕ್ಷರು ಜನಜಾಗೃತಿ ವೇದಿಕೆ ಕಾಸರಗೋಡು ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಎಂ. ಶ್ರೀಧರ್ ಭಟ್ ಆಡಳಿತ ಅಧಿಕಾರಿ ಶ್ರೀ ಭಾರತಿ ನೇತ್ರ ಚಿಕಿತ್ಸಾಲಯ ಇವರು ಕಣ್ಣಿನ ಪೊರೆ ಚಿಕಿತ್ಸೆಯ ಬಗ್ಗೆ ಪ್ರಾಸ್ತಾವಿಕ ಮಾತನ್ನು ಮಾತಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಜೇಶ್ವರ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣರವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಮತ್ತು ಯೋಜನೆಯ ಆಡಳಿತ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹರೀಶ್ ಶೆಟ್ಟಿ ಕಡಂಬಾರು ಜನಜಾಗೃತಿ ಉಪಾಧ್ಯಕ್ಷರು ಕಾಸರಗೋಡು, ದಿನೇಶ್ ಚಿರುಗೋಳಿ ಅಧ್ಯಕ್ಷರು ಧರ್ಮಸ್ಥಳ ಭಜನಾ ಪರಿಷತ್ ಮಂಜೇಶ್ವರ ತಾಲ್ಲೂಕು, ಉದಯ ಕುಮಾರ್ ಕೇಂದ್ರ ಒಕ್ಕೂಟ ಅಧ್ಯಕ್ಷರು ಮಂಜೇಶ್ವರ ತಾಲ್ಲೂಕು, ಡಾ. ಆನಂದ್ ಎಸ್ ಹಂಡಿ ಶುಭ ಕೋರಿದರು, ಭಾಸ್ಕರ್ ಮೇಲ್ವಿಚಾರಕರು ತಲಪಾಡಿ ವಲಯ ಸ್ವಾಗತಿಸಿ, ಹೇಮಲತಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾರ್ಯಕ್ರಮವನ್ನು ನಿರೂಪಿಸಿ, ಲಯನ್ ಕಮಲಾಕ್ಷ ಪಂಜ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಮಾಲಿನಿ, ಜಯಂತಿ ಅಧ್ಯಕ್ಷರು ಉಪ್ಪಳ ಒಕ್ಕೂಟ ಉಪಸ್ಥಿತರಿದ್ದರು. ಈ ವೇಳೆ 45 ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.