ಸುಂಕದಕಟ್ಟೆ ಪಡುಮೂಲೆ ಶ್ರೀ ಕುಮಾರಸ್ವಾಮಿ ಕ್ಷೇತದಲ್ಲಿ ಶ್ರೀ ಅಣ್ಣಪ್ಪ ದೈವದ ವಾರ್ಷಿಕ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ನವೆಂಬರ್ ತಿಂಗಳ 11ರಂದು.
ಅಕ್ಟೋಬರ್ 20, 2023
0
ಸುಂಕದಕಟ್ಟೆ ಪಡುಮೂಲೆ ಶ್ರೀ ಕುಮಾರಸ್ವಾಮಿ ಕ್ಷೇತದಲ್ಲಿ ಶ್ರೀ ಅಣ್ಣಪ್ಪ ದೈವದ ವಾರ್ಷಿಕ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ನವೆಂಬರ್ ತಿಂಗಳ 11ರಂದು.
ವರ್ಕಾಡಿ: ಶ್ರೀ ಕುಮಾರಸ್ವಾಮಿ ಕ್ಷೇತ್ರ ಪಡುಮೂಲೆ, ಸುಂಕದಕಟ್ಟೆ ಶ್ರೀ ಕ್ಷೇತದಲ್ಲಿ ಶ್ರೀ ಅಣ್ಣಪ್ಪ ದೈವದ ವಾರ್ಷಿಕ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ನವೆಂಬರ್ ತಿಂಗಳ 11ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಬೆಳಗ್ಗೆ ಗಂಟೆ 6.00 ಗಂಟೆಗೆ ಗಣಹೋಮ, 7.00 ಕ್ಕೆ ನಾಗತಂಬಿಲ ಹಾಗೂ 9.30 ಕ್ಕೆ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ಮಧ್ಯಾಹ್ನ 12.00 ಕ್ಕೆ ಮಹಾ ಮಂಗಳಾರತಿ, ತದನಂತರ ಶ್ರೀ ದೇವಿಗೆ ಹೂವಿನ ಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ 2 ರಿಂದ ಓಂಕಾರ ನಾಟ್ಯಲಯ ವರ್ಕಾಡಿ, ಸುಷ್ಮಾ ವರ್ಕಾಡಿ ಬಳಗದವರಿಂದ ನೃತ್ಯ ವೈಭವ, ಸಂಜೆ 4.00 ರಿಂದ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ "ರುಕ್ಮಿಣಿ - ಸ್ವಯಂವರ ಜಾಂಬವತಿ ಕಲ್ಯಾಣ" ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಭಾಗವತರಾಗಿ ಸತ್ಯನಾರಾಯಣ ಪುಣಿಂಚಿತ್ತಾಯ, ದೀರಜ್ ರೈ ಸಂಪಾಜೆ, ಚೆಂಡೆ ಮತ್ತು ಮೃಂದಗ ವಾಹಕರಾಗಿ ಪ್ರಶಾಂತ್ ವಗೆನಾಡು, ಹಾಗೂ ಗಣೇಶ್ ಭಟ್ ನೆಕ್ಕರೆಮೂಲೆ, ಜಿತೇಶ್ ಬಿ.ಕೋಳ್ಯೂರು, ಚಕ್ರತಾಳದಲ್ಲಿ ಕೀರ್ತನ್ ಕೋಳ್ಯೂರು ಸಹಕರಿಸಲಿದ್ದಾರೆ. ಮುಮ್ಮೆಳದಲ್ಲಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸದಾಶಿವ ಕುಲಾಲ್, ದಿವಾಕರ್ ರೈ ಸಂಪಾಜೆ, ಪ್ರಜ್ವಲ್ ಕುಮಾರ್, ಮಹೇಶ್ ಮಣಿಯಾಣಿ ದೊಡ್ಡತೋಟ, ಸಂದೀಪ್ ಕೋಳ್ಯೂರು, ಶಿವರಾಜ್ ಕೂಡ್ಲು, ಶಿವಾನಂದ ಶೆಟ್ಟಿ ಪೆರ್ಲ, ಕಿರಣ್ ಕೊಂಚಾಡಿ ರಂಜಿಸಲಿರುವರು. ಭಾಸ್ಕರ ಕೋಳ್ಯೂರು ಕಾರ್ಯಕ್ರಮದ ಸಂಯೋಜಕರಾಗಿರುವರು .ರಾತ್ರಿ 10.00 ಗಂಟೆಯಿಂದ ಶ್ರೀ ದೇವರ ಬಲಿ ಉತ್ಸವ ಹಾಗೂ ಅಣ್ಣಪ್ಪ ದೈವದ ನೇಮೋತ್ಸವ ನಡೆಯಲಿದೆ.
ಸದ್ಬಕ್ತ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೈವ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಿ, ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.



