Breaking Posts

6/trending/recent
Type Here to Get Search Results !

8:10:45

ಕೇಂದ್ರ ಸರಕಾರದ ವಿರುದ್ಧ ಮೀಯಪದವಿನಲ್ಲಿ ಉದ್ಯೋಗ ಖಾತರಿ ಕಾರ್ಮಿಕರ ಪ್ರತಿಭಟನೆ.

ಕೇಂದ್ರ ಸರಕಾರದ ವಿರುದ್ಧ ಮೀಯಪದವಿನಲ್ಲಿ ಉದ್ಯೋಗ ಖಾತರಿ ಕಾರ್ಮಿಕರ ಪ್ರತಿಭಟನೆ.
ಮೀಯಪದವು: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸುವ ಕ್ರಮವನ್ನು ಕೊನೆಗೊಳಿಸಿ, ಹೆಚ್ಚಿಸಿದ ಮಜೂರಿಯನ್ನು ಕೂಡಲೇ ವಿತರಿಸಿ, ಕಡಿತಗೊಳಿಸಿದ ಲೇಬರ್ ಬಜೆಟ್ ಪುನಸ್ತಾಪಿಸಿ, ಕೇಂದ್ರ ಸರಕಾರವು ಉದ್ಯೋಗ ಖಾತರಿ ಯೋಜನೆಯ ಅವಗಣನೆಯನ್ನು ಕೊನೆಗೊಳಿಸಿ, ಮುಂತಾದ ಬೇಡಿಕೆಯನ್ನು ಮುಂದಿಟ್ಟು ಕೊಂಡು N.R.E.G ಯೂನಿಯನ್ ನೇತ್ರತ್ವದಲ್ಲಿ ಮೀಯಪದವಿನಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ಎ. ಕರೀಂ ಉದ್ಘಾಟಿಸಿದರು.
ಮೀಂಜ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಕಮಿಟಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ, ರಾಮಚಂದ್ರ ಟಿ., ಹಾಗೂ ಹಂಸ, ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘಟನಾ ಸದಸ್ಯೆ ಶ್ರೀಮತಿ ಐರಿನ್ ಜೋಸ್ಪಿನ್ ಸ್ವಾಗತಿಸಿ, ಸದಸ್ಯೆ ಶ್ರೀಮತಿ ಚಂದ್ರಾವತಿ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.