ಶ್ರೀ ಸರಸ್ವತೀ ಮಾತೃ ಮಂಡಳಿಯು ಭಕ್ತರ ಸಹಕಾರದೊಂದಿಗೆ 21 ಕೆಜಿ ಬೆಳ್ಳಿಯಲ್ಲಿ ತಯಾರಿಸಿದ ಜಗದ್ಗುರುಗಳ "ಪಟ್ಟದ ದೇವರ ರಜತ ಮಂಟಪ ಸಮರ್ಪಣೆ" ಮತ್ತು "ಶ್ರೀ ಕರಾರ್ಚಿತ ಪೂಜೆ" ಉಡುಪಿ ಪಡುಕುತ್ಯಾರುವಿನನಲ್ಲಿ ನಾಳೆ ಮುಂಜಾನೆ.
ಅಕ್ಟೋಬರ್ 14, 2023
0
ಶ್ರೀ ಸರಸ್ವತೀ ಮಾತೃ ಮಂಡಳಿಯು ಭಕ್ತರ ಸಹಕಾರದೊಂದಿಗೆ 21 ಕೆಜಿ ಬೆಳ್ಳಿಯಲ್ಲಿ ತಯಾರಿಸಿದ ಜಗದ್ಗುರುಗಳ "ಪಟ್ಟದ ದೇವರ ರಜತ ಮಂಟಪ ಸಮರ್ಪಣೆ" ಮತ್ತು "ಶ್ರೀ ಕರಾರ್ಚಿತ ಪೂಜೆ" ಉಡುಪಿ ಪಡುಕುತ್ಯಾರುವಿನನಲ್ಲಿ ನಾಳೆ ಮುಂಜಾನೆ.
ಉಡುಪಿ ಪಡುಕುತ್ಯಾರು: ಶ್ರೀ ಸರಸ್ವತೀ ಮಾತೃ ಮಂಡಳಿ
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿಯಲ್ಲಿ
ಸರ್ವ ಭಕ್ತರ ಸಹಕಾರದಿಂದ
ಮಾತೃ ಮಂಡಳಿಯ ವತಿಯಿಂದ 21 ಕೆಜಿ ಬೆಳ್ಳಿಯಲ್ಲಿ ತಯಾರಿಸಲಾದ 5.5 ಫೀಟ್ ಎತ್ತರ ಹಾಗೂ 3.5 ಫೀಟ್ ಅಗಲದ ಜಗದ್ಗುರುಗಳವರ "ಪಟ್ಟದ ದೇವರ ರಜತ ಮಂಟಪ"ವನ್ನು
ಶರನ್ನವರಾತ್ರಿಯ ಆರಂಭದ ದಿನವಾದ ನಾಳೆ (ಅಕ್ಟೋಬರ್ 15 ರಂದು) ಭಾನುವಾರ ಬೆಳಗ್ಗೆ 6 ಗಂಟೆಗೆ ಜಗದ್ಗುರುಗಳವರಿಂದ
ಶ್ರೀಕರಾರ್ಚಿತ ಪೂಜೆಗೆ ಸಮರ್ಪಣೆಗೊಳಲ್ಲಿದೆ. ಈ ವೇಳೆ ಪ್ರತಿಷ್ಠಾನದ ಹಾಗೂ ಸಹ ಟ್ರಸ್ಟ್ ಮತ್ತು ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿರುವರು. ಈ ಪುಣ್ಯ ವೇಳೆಯಲ್ಲಿ ಭಗವಧಕ್ತರು ಪಾಲ್ಗೊಂಡು, ಜಗದ್ಗುರುಗಳವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಮಹಿಳಾ ಸಂಘದ ಗೌರವಾಧ್ಯಕ್ಷರಾದ ಮಾತೋ ಶ್ರೀ ಸರಳಮ್ಮ ಗುರುನಾಥ ಸ್ವಾಮೀಜಿ ಶಿಕಾರಿಪುರ, ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಮಾ ನವೀನ್ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ಶ್ರೀಮತಿ ದೀಪಾ ಸುರೇಶ್ ಆಚಾರ್ಯ ಉಡುಪಿ, ಹಾಗೂ
ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಿಳಿಸಿದ್ದಾರೆ. ಬೆಳಗ್ಗೆ 4.30 ಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದ್ದು, ಕಾರ್ಯಕ್ರಮವನ್ನು ಮಂಗಳೂರಿನ ಭ್ರಾಮರಿ ಭಕ್ತಿ ಟಿವಿಯು ಚಿತ್ರೀಕರಿಸಿ, ಯುಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರವನ್ನು ಬಿತ್ತರಿಸಲಿದೆ.


