Breaking Posts

6/trending/recent
Type Here to Get Search Results !

8:10:45

ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ನೂತನ ಬ್ಯಾಂಡ್ ದಳದ "ಪಾಸಿಂಗ್ ಔಟ್" ಉದ್ಘಾಟನೆ.

ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ನೂತನ ಬ್ಯಾಂಡ್ ದಳದ "ಪಾಸಿಂಗ್ ಔಟ್" ಉದ್ಘಾಟನೆ.
ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರು ಇದರ ನೂತನ ಬ್ಯಾಂಡ್ ದಳದ "ಪಾಸಿಂಗ್ ಔಟ್" ಸಮಾರಂಭ ಜರಗಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕರ್ನಲ್ ಹೆ ಸಜೀಂದ್ರನ್ ಸಿ (ಕಮಾಂಡಿಂಗ್ ಆಫೀಸರ್ 32 ಕೇರಳ ಬೆಟಾಲಿಯನ್ ಎನ್‌.ಸಿ.ಸಿ) ಭಾಗವಹಿಸಿ,
ಬ್ಯಾಂಡ್ ಮ್ಯಾನೇಜರ್ ಸೆರಮೊನಿಯಲ್ ಮೇಸ್ ನ್ನು ಹಸ್ತಾಂತರಿಸಿ,
ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬ್ಯಾಂಡ್ ಮಾಸ್ಟರ್ ಶ್ರೀ ಕೆ ವಿ ಜಯರಾಮ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಮುಂದಾಳು ಶ್ರೀ ಹಮೀದ್ ಕುಂಞಾಲಿ ತ್ರೈಮಾಸಿಕ ಸಂಚಿಕೆ ಬಿಡುಗಡೆ ಮಾಡಿದರು. ಪ್ರಸ್ತುತ ಪ್ರಶಾಂತಿ ವಿದ್ಯಾ ಕೇಂದ್ರದ ನೂತನ ಡಾಕ್ಯುಮೆಂಟರಿ ಸಾಕ್ಷ ಚಿತ್ರವನ್ನು ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಬಾಯಾರು ಇದರ ಸಂಚಾಲಕರಾದ ಸಿ. ಕೆ ಗೋಪಾಲಕೃಷ್ಣ ಭಟ್ ಬಿಡುಗಡೆಗೊಳಿಸಿದರು. ಶಾಲಾ ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್ ಅವರು ಪ್ರಶಾಂತಿ ವಿದ್ಯಾ ಕೇಂದ್ರದ ನೂತನ ಅಂತರ್ಜಾಲವನ್ನು ಪುನರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಿ.ಎಂ ನಾರಾಯಣ ಭಟ್ (ಕೋಶಾಧಿಕಾರಿಗಳು ಪ್ರಶಾಂತಿ ಸೇವಾ ಟ್ರಸ್ಟ್ ) ನಿರ್ವಹಿಸಿದರು. ಮ್ಯಾನೇಜಿಂಗ್ ಟ್ರಸ್ಟಿ ಹಿರಣ್ಯ ಮಾಹಾಲಿಂಗ ಭಟ್, ಪ್ರಾಂಶುಪಾಲರಾದ ವಾಮನನ್, ನಿಲಯ ಪಾಲಕರಾದ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಆಂಗ್ಲ ಅಧ್ಯಾಪಕರಾದ ಶ್ರೀ ಶ್ರೀಕಾಂತ್ ವಂದನಾರ್ಪಣೆ ಗೈದರು. ಶಾಲಾ ಶಿಕ್ಷಕ ವೃಂದ ಮತ್ತು ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.