Breaking Posts

6/trending/recent
Type Here to Get Search Results !

8:10:45

ಮಂಗಲ್ಪಾಡಿ ಗ್ರಾಮ ಪಂಚಾಯತ್ ಮುಸ್ಲಿಂ ಲೀಗ್ ಆಡಳಿತದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಬಿಜೆಪಿ ನೇತ್ರತ್ವದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಫೀಸು ಗೆ ಮಾರ್ಚ್.

ಮಂಗಲ್ಪಾಡಿ ಗ್ರಾಮ ಪಂಚಾಯತ್ ಮುಸ್ಲಿಂ ಲೀಗ್ ಆಡಳಿತದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಬಿಜೆಪಿ ನೇತ್ರತ್ವದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಫೀಸು ಗೆ ಮಾರ್ಚ್.
ಮಂಜೇಶ್ವರ: ಮುಸ್ಲಿಂ ಲೀಗ್ ಆಡಳಿತದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ನೇತ್ರತ್ವದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಫೀಸು ಗೆ ಮಾರ್ಚ್ ನಡೆಯಿತು.
ಕೈಕಂಬದಿಂದ ಹೊರಟು ಪಂಚಾಯತು ಆಫೀಸ್ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಉದ್ಘಾಟಿಸಿ ಪಂಚಾಯತಿನ ವೈಫಲ್ಯವನ್ನು ವಿವರಿಸಿದರು. ಅಧ್ಯಕ್ಷತೆಯನ್ನು ಬಿಜೆಪಿ ಪಂಚಾಯತು ಸಮಿತಿ ಅಧ್ಯಕ್ಷರಾದ ರಾಮಚಂದ್ರ ಬಲ್ಲಾಳ್ ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷರಾದ ಸುಧಾಮ ಗೊಸಾಡ, ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷರಾದ ಸುನಿಲ್ ಕುಮಾರ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಕುಮಾರ್ ಮಯ್ಯ, ಅನಿಲ್ ಕುಮಾರ್ ಕೆ.ಪಿ, ಜಿಲ್ಲಾ ಸಮಿತಿ ಸದಸ್ಯರಾದ ಬಾಬು ಕುಬನೂರ್, ಜಯಂತಿ ಶೆಟ್ಟಿ, ನೇತಾರರಾದ ಭರತ್ ರೈ, ಸೀತಾರಾಮ ಭಂಡಾರಿ, ರಘು ಸಿ, ಬಾಲಕೃಷ್ಣ ಆಂಬಾರ್, ಸ್ವಾಗತ್ ಕುಮಾರ್, ಹರಿನಾಥ ಭಂಡಾರಿ, ಸುರೇಶ್ ಮುಟ್ಟ, ಸುರೇಶ ಹೇರೂರ್, ಭಾಗೀರಥಿ ಇಚ್ಲಂಗೊಡ್, ಅನಿಲ್ ಐಲ, ಗಣೇಶ್ ಕೆ. ಯನ್, ಪಂಚಾಯತು ಸದಸ್ಯರಾದ ಸುಧಾ. ವಿ.ವಿ, ರೇವತಿ ಕೆ, ಯುವಮೋರ್ಚಾ ನೇತಾರರಾದ ಕಿಶೋರ್ ಭಗವತಿ, ಯುವಮೋರ್ಚಾ ಪಂಚಾಯತು ಸಮಿತಿ ಅಧ್ಯಕ್ಷರಾದ ಉಣ್ಣಿ ಪ್ರತಾಪನಗರ, ಮತ್ತು ಹಲವಾರು ನೇತಾರರು, ಕಾರ್ಯಕರ್ತರು ಭಾಗವಹಿಸಿದರು. ಪಂಚಾಯತು ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಸ್ವಾಗತಿಸಿ, ಯುವಮೋರ್ಚಾ ನೇತಾರರಾದ ಅಮಿತ್ ಪರಂಕಿಲ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.