ಕೃಷಿ ಕಾರ್ಮಿಕರ ಹಾಗೂ ಕೆ. ಎಸ್. ಕೆ.ಟಿ. ಯು ಮಂಜೇಶ್ವರ ಏರಿಯಾ ಸಮ್ಮೇಳನ. ಸಂಘಟನೆಯ ಮಂಜೇಶ್ವರ ಏರಿಯಾ ಕಾರ್ಯದರ್ಶಿಯಾಗಿ ಕಮಲಾಕ್ಷ ಕನಿಲ ಪುನರಾಯ್ಕೆ.
ಅಕ್ಟೋಬರ್ 04, 2023
0
ಕೃಷಿ ಕಾರ್ಮಿಕರ ಹಾಗೂ ಕೆ. ಎಸ್. ಕೆ.ಟಿ. ಯು ಮಂಜೇಶ್ವರ ಏರಿಯಾ ಸಮ್ಮೇಳನ. ಸಂಘಟನೆಯ ಮಂಜೇಶ್ವರ ಏರಿಯಾ ಕಾರ್ಯದರ್ಶಿಯಾಗಿ ಕಮಲಾಕ್ಷ ಕನಿಲ ಪುನರಾಯ್ಕೆ.ಮಂಜೇಶ್ವರ: ಕೃಷಿ ಕಾರ್ಮಿಕರ ಸಂಘಟನೆಯಾದ ಕೆ.ಎಸ್.ಕೆ. ಟಿ. ಯು. ಮಂಜೇಶ್ವರ ಏರಿಯಾ ಸಮ್ಮೇಳನವನ್ನು ಕಾ: ಏ. ಅಬೂಬಕ್ಕರ್ ನಗರ ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್ ನ ಸಭಾಂಗಣದಲ್ಲಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಶ್ರೀಮತಿ ಕೋಮಲ ಲಕ್ಷ್ಮಣನ್ ಉದ್ಘಾಟಿಸಿದರು. ಕಾ: ಬಾಳಪ್ಪ ಬಂಗೇರ ಅಧ್ಯಕ್ಷತೆ ವಹಿಸಿದರು. ನೇತಾರರಾದ ಕಾ: ರಾಧಾಕೃಷ್ಣನ್ ಪಳ್ಳಿಕೆ, ಕಾ: ಕುಂಞ ಕಣ್ಣನ್, ಕಾ: ಜಾಸ್ಮಿನ್, ಕಾ:ಕೆ. ಆರ್. ಜಯಾನಂದ, ಕಾ: ಡಿ. ಕಮಲಾಕ್ಷ, ಕಾ: ರಾಮಚಂದ್ರ ಟಿ. ಸ್ವಾಗತ ಸಂಘ ಚಯರ್ಮೆನ್ ಕಾ: ಲೋಕೇಶ್ ಸಿ., ಕಾ: ಐರಿನ್ ಜಾಸ್ಫಿನ್, ಕಾ: ಪ್ರಶಾಂತ್ ಕನಿಲ, ಭಾಗವಹಿಸಿದರು. ಏರಿಯಾ ಕಾರ್ಯದರ್ಶಿ ಕಾ: ಕೆ. ಕಮಲಾಕ್ಷ ಸ್ವಾಗತಿಸಿದರು. ಈ ವೇಳೆ ಸತತ ಎರಡನೇ ಬಾರಿ KSKTU ಮಂಜೇಶ್ವರ ಏರಿಯಾ ಕಾರ್ಯದರ್ಶಿಯಾಗಿ ಕಮಲಾಕ್ಷ ಕನಿಲ ಆಯ್ಕೆಯಾದರು.




