Breaking Posts

6/trending/recent
Type Here to Get Search Results !

8:10:45

ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ "ವೆಸ್ಟ್ ಯೂನಿಟ್ ವಾರ್ಷಿಕ ಸಮ್ಮೇಳನ 2022 - 23". ನೂತನ ಪದಾಧಿಕಾರಿಗಳ ಪದಗ್ರಹಣ.

ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ "ವೆಸ್ಟ್ ಯೂನಿಟ್ ವಾರ್ಷಿಕ ಸಮ್ಮೇಳನ 2022 - 23".
ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ ವೆಸ್ಟ್ ಯೂನಿಟ್ ಕಾಸರಗೋಡು ಇದರ ವಾರ್ಷಿಕ ಸಮ್ಮೇಳನವು ಕಾಸರಗೋಡು ಕೋ-ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಶ್ರೀಮತಿ ವೀಣಾ ಮೈಂದಪ್ಪ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮ್ಮೇಳನದಲ್ಲಿ ಯೂನಿಟ್ ಜತೆ ಕಾರ್ಯದರ್ಶಿ ವಿಶಾಖ್.ಪಿ ಅನುಸ್ಮರಣೆ , ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿದರು. ಯೂನಿಟ್ ಅಧ್ಯಕ್ಷ ರತೀಶ್ ರಾಮು ವಿಡಿಯೊ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನವನ್ನು ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷರಾದ ಶ್ರೀ ವಾಸು.ಎ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ
ವಿಶ್ವ ಛಾಯಾಗ್ರಹಣ ದಿನ ಪ್ರಯುಕ್ತ ರಾಜ್ಯ ಸಮಿತಿಯು ನಡೆಸಿದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ ಮಣಿ ಐಫೋಕಸ್, ಗ್ಲೋಬಲ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ಅಭಿಲಾಷ್. ಜಿ, ಕ್ರಿಕೆಟ್ ಆಟಕ್ಕೆ ನೇತೃತ್ವ ವಹಿಸಿದ ವೆಸ್ಟ್ ಯೂನಿಟ್ ಐಕನ್ ಪ್ಲೇಯರ್ ಮನೋಜ್ ಕುಮಾರ್ ತ್ರಿದಳ್ ಹಾಗೂ ಎಸ್.ಎಸ್.ಎಲ್.ಸಿ ಅತ್ಯಧಿಕ ಅಂಕಗಳಿಸಿದ ಯೂನಿಟ್ ಉಪಾಧ್ಯಕ್ಷರಾದ ಗಣೇಶ್ ರೈ ಅವರ ಮಗ ರಕ್ಷಿತ್ ರೈ ಎಂಬೀವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಎ.ಕೆ.ಪಿ.ಎ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ.ಸಿ.ಅಬ್ರಹಾಂ ಮುಖ್ಯ ಭಾಷಣ ಮಾಡಿದರು. ವಲಯ ಕಾರ್ಯದರ್ಶಿ ಚಂದ್ರಶೇಖರ. ಎಂ ಸಂಘಟನೆ ವರದಿ ವಾಚಿಸಿದರು. ಎ.ಕೆ.ಪಿ.ಎ ರಾಜ್ಯ ಸಮಿತಿ ಸದಸ್ಯ ಮತ್ತು ವನಿತಾ ವಿಂಗ್ ಕೋರ್ಡಿನೇಟರ್ ಶ್ರೀ ಹರೀಶ್ ಪಾಲಕುನ್ನು, ಜಿಲ್ಲಾ ಕಾರ್ಯದರ್ಶಿ ಶ್ರೀ ಸುಗುಣನ್ ಇರಿಯಾ,ಜಿಲ್ಲಾ ಕೋಶಾಧಿಕಾರಿ ಶ್ರೀ ವೇಣು ವಿ.ವಿ, ಜಲ್ಲಾ ಉಪಾಧ್ಯಕ್ಷ ಮತ್ತು ವಲಯ ನಿರೀಕ್ಷಕ ಶ್ರೀ ವಿಜಯನ್ ಶೃಂಗಾರ್, ಜಿಲ್ಲಾ ಇನ್ಶುರೆನ್ಸ್‌ ಕೋರ್ಡಿನೇಟರ್, ಶ್ರೀ ಅಶೋಕನ್ ಪಿ.ಕೆ, , ವಲಯ ಕೋಶಾಧಿಕಾರಿ ರೇಖಾ, ವಲಯ ಜತೆಕಾರ್ಯದರ್ಶಿಯೂ ಯೂನಿಟ್ ನಿರೀಕ್ಷಕರಾದ ನಿಯಾಸ್ ಎಂಬವರು ಶುಭಾಶಂಸನೆಗೈದರು. ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ವಾರ್ಷಿಕ ವರದಿ, ಕೋಶಾಧಿಕಾರಿ ಅಮಿತ್ ಲೆಕ್ಕಪತ್ರ ಮಂಡಿಸಿದರು. 2023 - 24 ವರ್ಷಕ್ಕೆ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಶ್ರೀ ಮೈಂದಪ್ಪ(ಅಧ್ಯಕ್ಷರು) ಶ್ರೀ ಗಣೇಶ್ ರೈ (ಉಪಾಧ್ಯಕ್ಷರು) ವಸಂತ್ ಕೆರೆಮನೆ (ಕಾರ್ಯದರ್ಶಿ) ವಿಶಾಖ್ ಪಿ(ಜತೆಕಾರ್ಯದರ್ಶಿ) ಅಮಿತ್ ಕುಮಾರ್(ಕೋಶಾಧಿಕಾರಿ) ಸುಬ್ರಹ್ಮಣ್ಯ ವಿಡಿಯೋನಿಕ್ಸ್ (ಪಿ.ಆರ್.ಒ) ರತೀಶ್ ರಾಮು ವಿಡಿಯೋ, ವಾಸು.ಎ, ಚಂದ್ರಶೇಖರ. ಎಂ ಇವರು ವಲಯ ಸಮಿತಿಗೂ ಅಭಿಷೇಕ್, ಮೌನೇಶ್, ಶ್ರೀಮತಿ ಶೈಲಜಾ ಇವರು ಯೂನಿಟ್ ಸಮಿತಿಗೂ ಆಯ್ಕೆಯಾದರು.
49 ಸದಸ್ಯರಿದ್ದ ಯೂನಿಟಿನಿಂದ ಈ ಸಮ್ಮೇಳನಕ್ಕೆ 40 ಮಂದಿ ಭಾಗವಹಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಗೂ ಯೂನಿಟ್ ವತಿಯಿಂದ ಬ್ಯಾಗ್ ನೀಡಲಾಯಿತು. ಕೊನೆಯಲ್ಲಿ ಯೂನಿಟ್ ಉಪಾಧ್ಯಕ್ಷ ಗಣೇಶ್ ರೈ, ಧನ್ಯವಾದ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.