Breaking Posts

6/trending/recent
Type Here to Get Search Results !

8:10:45

ಹಿರಿಯ ಪತ್ರಕರ್ತ, ಸಾಹಿತಿ, ಸಂಘಟಕ, ಪ್ರತಿಭಾ ಫೋಷಕ ಶೇಖರ್ ಅಜೆಕಾರು (54) ಹೃದಯಾಘಾತದಿಂದ ನಿಧನ.

ಹಿರಿಯ ಪತ್ರಕರ್ತ, ಸಾಹಿತಿ, ಸಂಘಟಕ, ಪ್ರತಿಭಾ ಫೋಷಕ ಶೇಖರ್ ಅಜೆಕಾರು (54) ಹೃದಯಾಘಾತದಿಂದ ನಿಧನ.
ಕಾರ್ಕಳ:ಹಿರಿಯ ಪತ್ರಕರ್ತ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಶೇಖರ ಅಜೆಕಾರು (54) ಹೃದಯಾಘತಗೊಂಡು ಇಂದು ನಿಧನರಾದರು. ಬೆಳಿಗ್ಗೆ ಕಾರ್ಕಳದ ಅಜೇಕಾರಿನ ತನ್ನ ಮನೆಯಲ್ಲಿ ಕುಸಿದು ಬಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾದರು. ಮುಂಬೈಯಲ್ಲಿ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಆರಂಭಿಸಿದ ಶೇಖರ್ ರವರು ಊರಿಗೆ ಬಂದ ಬಳಿಕ ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲಿಸಿದ್ದರು. ಜನವಾಹಿನಿ ಪತ್ರಿಕೆ ಆರಂಭಗೊಂಡಾಗ ಹಲವು ಒಡನಾಡಿಗಳ ಜೊತೆಗೆ ಆ ಪತ್ರಿಕೆಯನ್ನು ಸೇರಿದ್ದರು. ಬಳಿಕ ಕನ್ನಡಪ್ರಭ, ವಿಜಯ ಕರ್ನಾಟಕ ಪತ್ರಿಕೆಗಳಿಗೆ ಸುದ್ದಿ ಬರೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪತ್ರಿಕಾ ವೃತ್ತಿಯ ಜೊತೆಗೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿದ್ದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿದ್ದರು. ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದ ಶೇಖರ್ ಅಜೆಕಾರ್ ರವರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆಯ ಪತ್ರಕರ್ತರಿಗೂ, ಸಾಹಿತಿಗಳಿಗೂ, ಸಂಘಟಕರಿಗೂ ಚಿರಪರಿಚಿತರಾಗಿದ್ದರು. ಕಾಸರಗೋಡಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಲ್ಲದೇ ಪತ್ರಕರ್ತ, ಸಾಹಿತಿ, ಸಂಘಟಕ, ಪ್ರತಿಭಾ ಫೋಷಕರಾಗಿರುವ ಜಯ ಮಣಿಯಂಪಾರೆಯವರ ಆತ್ಮೀಯರಾಗಿ, ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ ಮುಂತಾದ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಯುವ ಪ್ರತಿಭೆಗಳಿಗೆ ವೇದಿಕೆ ನೀಡಿ ಪ್ರೋತ್ಸಾಹ, ಸಾಧನೆಗೈದ ಸಾಧಕರಿಗೆ ಬಿರುದುಬಾವಲಿ ನೀಡಿ ಗೌರವಿಸಿದ್ದರು. ಅಜೆಕಾರುರವರ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಅವಾರ್ಡ್ 2018, ಕೃಷಿ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಪತ್ರಕರ್ತ ಸಾಹಿತಿ ಸಂಘಟಕ ಜಯ ಮಣಿಯಂಪಾರೆ, ಹರೀಶ್ ಸುಲಾಯ ಒಡ್ಡoಬೆಟ್ಟು, ರತನ್ ಕುಮಾರ್ ಹೊಸಂಗಡಿ, ದೀಪಕ್ ರಾಜ್ ಉಪ್ಪಳ, ಮಂಜುನಾಥ ಅಡಪ ಸಂಕಬೈಲು ಸೇರಿದಂತೆ ಕಾಸರಗೋಡು ಜಿಲ್ಲೆಯ ಕನ್ನಡ ಪತ್ರಕರ್ತರು ಸಾಹಿತಿಗಳು, ಸಂಘಟಕರು ಗಾಢವಾದ ಸಂತಾಪವನ್ನು ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.