ನೆಟ್ ಝೀರೋ ಕಾರ್ಬನ್ ಕೇರಳ ಜನತೆಯೊಂದಿಗೆ ಪುತ್ತಿಗೆ ಗ್ರಾಮ ಪಂಚಾಯತ್ ಸ್ವಾಗತ ಸಮಿತಿ ಕಾರ್ಯಗಾರ.
ಅಕ್ಟೋಬರ್ 31, 2023
0
ನೆಟ್ ಝೀರೋ ಕಾರ್ಬನ್ ಕೇರಳ ಜನತೆಯೊಂದಿಗೆ ಪುತ್ತಿಗೆ ಗ್ರಾಮ ಪಂಚಾಯತ್ ಸ್ವಾಗತ ಸಮಿತಿ ಕಾರ್ಯಗಾರ ನಡೆಯಿತು.
ಪುತ್ತಿಗೆ: ನವ ಕೇರಳ ಕ್ರಿಯಾ ಯೋಜನೆ II ರ ಅಂಗವಾಗಿ ಹರೀತ ಕೇರಳ ಮಿಷನ್ ಹಾಗೂ ಪುತ್ತಿಗೆ ಗ್ರಾಮ ಪಂಚಾಯತ್ ಸಂಯುಕ್ತವಾಗಿ ಜಾರಿಗೊಳಿಸುವ ನೆಟ್ ಝೀರೋ ಕಾರ್ಬನ್ ಕೇರಳ ಜನತೆಯೊಂದಿಗೆ ಕ್ರಿಯಾ ಯೋಜನೆಯ ಅಂಗವಾಗಿ ಕಾರ್ಯಗಾರ ಪಂಚಾಯತ್ ಹಾಲ್ ನಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷರಾದ ಡಿ.ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಎಂ ಮಾತನಾಡಿದರು. ನವ ಕೇರಳ ಕ್ರಿಯಾ ಯೋಜನೆ ರಿಸೋರ್ಸ್ ಪರ್ಸನ್ ವಿನಯ್ ಕುಮಾರ್, ಲೋಹಿತಕ್ಷನ್ ಎಂಬೀವರು ವಿಷಯ ಮಂಡಿಸಿದರು. ಪಂಚಾಯತ್ ಕಾರ್ಯದರ್ಶಿ ರಾಜೇಶ್ವರಿ ಸ್ವಾಗತಿಸಿದರು. ಕಾರ್ಬನ್ ಪ್ರಮಾಣ ಕಡಿಮೆಗೊಳಿಸಲು ಬೇಕಾಗಿ ಪಂಚಾಯತ್ ನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಊರಿನ ಸಮಸ್ತ ಜನರ ಭಾಗವಹಿಸುವಿಕೆಯೊಂದಿಗೆ ಇನ್ನಿತರ ಯೋಜನೆಯನ್ನು ಜಾರಿಗೆ ತರಲಾಗುವುದು.
