Breaking Posts

6/trending/recent
Type Here to Get Search Results !

8:10:45

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ಅಕ್ಟೋಬರ್ 30 ಹಾಗೂ 31 ರಂದು: ಆಹ್ವಾನ ಪತ್ರಿಕೆ ಬಿಡುಗಡೆ.

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ಅಕ್ಟೋಬರ್ 30 ಹಾಗೂ 31 ರಂದು: ಆಹ್ವಾನ ಪತ್ರಿಕೆ ಬಿಡುಗಡೆ.
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಅಕ್ಟೋಬರ್ 30 ಹಾಗೂ 31 ರಂದು ನಡೆಯಲಿರುವ ಶಾಸ್ತ್ರೋತ್ಸವದ ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಸಂಬಂಧಪಟ್ಟವರು ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಮಂಜೇಶ್ವರ ಉಪ ಜಿಲ್ಲಾ ಮಟ್ಟದ 112 ಶಾಲೆಗಳ ಸುಮಾರು 3000 ದಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವುದಾಗಿ ಶಾಲಾ ಮುಖ್ಯೋಪಧ್ಯಾಯರಾದ ಬಾಲಕೃಷ್ಣ ಜಿ ಹಾಗೂ ಪ್ರಾಂಶುಪಾಲರಾದ ಶಿಶುಪಾಲನ್ ಜಂಟಿಯಾಗಿ ಮಾಹಿತಿ ನೀಡಿದರು. ಅದೇ ರೀತಿ ಮೊದಲ ದಿನದ ವಿಜ್ಞಾನ ಮೇಳವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಲಿದ್ದಾರೆ. ಎರಡನೇ ದಿನದ ವಿಜ್ಞಾನ ಮೇಳವನ್ನು ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷೆ ಬೇಬಿ ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ಮೊದಲ ದಿನ ವಿಜ್ಞಾನ, ಗಣಿತ ಹಾಗೂ ಐಟಿ ವಿಭಾಗದ ವಿಜ್ಞಾನ ಮೇಳ ನಡೆಯಲಿದೆ. ಅದೇ ರೀತಿ ಎರಡನೇ ದಿನ ಸಮಾಜ ವಿಜ್ಞಾನ ಮತ್ತು ವೃತ್ತಿ ಪರಿಚಯದ ಮೇಳ ನಡೆಯಲಿದೆ. ಬಳಿಕ ಜಿ.ವಿ.ಎಚ್.ಎಸ್.ಎಸ್. ಕುಂಜತ್ತೂರು ಶಾಲೆಯಲ್ಲಿ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ಆಹ್ವಾನ ಪತ್ರಿಕೆ ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೊ ಬಿಡುಗಡೆ ಗೊಳಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಶಾಲಾ ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷ ಶ್ರೀ ಖಾದರ್ ಹನೀಫ, ಮಂಜೇಶ್ವರ ಉಪಜಿಲ್ಲಾ ಪ್ರಭಾರ ಸಹಾಯಕ ವಿದ್ಯಾಧಿಕಾರಿಗಳಾದ ಶ್ರೀ ಜಿತೇಂದ್ರ. ಎಸ್.ಎಚ್. ಶ್ರೀ ಶ್ಯಾಮಭಟ್,ಶಾಲಾ ಶಿಕ್ಷಕಿ ಯಾರಾದ ಅಮಿತಾ, ಅನಿತಾ, ಸರಿತಾ ಶಿಕ್ಷಕ ದಿವಾಕರ ಬಲ್ಲಾಳ್ ಮೊದಲಾದವರು ಉಪಸ್ತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.