ಸಸ್ಪೆನ್ಸ್ ಕಥೆಯಾಧಾರಿತ "ನಿಗೂಢ ಗುರುತು" ಚಲನ ಚಿತ್ರ ಬಿಡುಗಡೆ.
ಸೆಪ್ಟೆಂಬರ್ 15, 2023
0
ಸಸ್ಪೆನ್ಸ್ ಕಥೆಯಾಧಾರಿತ "ನಿಗೂಢ ಗುರುತು" ಚಲನ ಚಿತ್ರ ಬಿಡುಗಡೆ.
ಮಂಗಳೂರು: ಸಸ್ಪೆನ್ಸ್ ಕಥೆಯನ್ನು ಒಳಗೊಂಡ "ನಿಗೂಢ ಗುರುತು" ಚಿತ್ರದ ಬಿಡುಗಡೆ ಇಂದು ಬೆಳಗ್ಗೆ ಮಂಗಳೂರು ಭಾರತ್ ಮಾಲ್ ನಲ್ಲಿ ನಡೆಯಿತು. ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಸ್ಥಾನದ ತಮ್ಮ ದೈವದ ಪಾತ್ರಿ ಶ್ರೀ ತಿಮಿರಿ ಬೆಲ್ಚಪ್ಪಾಡರವರು ದೀಪ ಬೆಳಗಿಸಿ, ಚಿತ್ರಕ್ಕೆ ಶುಭ ಹಾರೈಸಿದರು. ಈ ವೇಳೆ ರಂಗ ಕಲಾವಿದೆ ಪ್ರಸಿದ್ಧ ಚಿತ್ರ ನಟಿ ರೂಪಾ ಶ್ರೀ ವರ್ಕಾಡಿ, ಕಾಂತಾರ ಚಿತ್ರ ಖ್ಯಾತಿಯ ನವೀನ್ ಬೊಂದೇಲ್, ನಿಗೂಢ ಗುರುತು ಚಲನ ಚಿತ್ರದ ನಿರ್ಮಾಪಕರಾದ ಶ್ರೀಮತಿ ಪ್ರಿಯಾ ಚಿದಾನಂದ್ ಪೆರ್ಲ, ಸಹ ನಿರ್ಮಾಪಕರಾದ ಚಿದಾನಂದ ಆಚಾರ್ಯ ಪೆರ್ಲ, ಕಾರ್ಯಕಾರಿ ನಿರ್ಮಾಪಕ ತುಕರಾಮ ಬಾಯಾರ್, ಸಹ ನಿರ್ದೇಶಕ: ಸಂತೋಷ್, ಪಿ.ಆರ್. ಒ. ರತನ್ ಕುಮಾರ್ ಹೊಸಂಗಡಿ, ಸೇರಿದಂತೆ ಚಲನಚಿತ್ರದಲ್ಲಿ ನಟಿಸಿದ ಪ್ರತಿಭಾನ್ವಿತ ಕಲಾವಿದರು, ಭಾಗವಹಿಸಿದರು. ಮಂಗಳೂರು ನ ಕದ್ರಿ ಪಾರ್ಕ್, ಬೊಂದೆಲ್, ಪಾದೆಕಲ್ಲು, ಪರಿಸರದಲ್ಲಿ ಚಿತ್ರೀಕರಣಗೊಂಡಿದ್ದು, ಮಂಗಳೂರಿನ ಹೊಸ ಪ್ರತಿಭೆಗಳನ್ನೇ ಬಳಸಿಕೊಂಡು "ನಿಗೂಢ ಗುರುತು" ಚಿತ್ರವನ್ನು ಮಾಡಲಾಗಿದೆ. ಚಿತ್ರಕ್ಕೆ ಉದಯಾನಂದ ಬರ್ಕೆ ಕಥೆ ಬರೆದು, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿದ್ದು, ಸಂತೋಷ್ ಕುಮಾರ್ ಸಹ ನಿರ್ದೇಶನ ಹಾಗೂ ಸಂಕಲನ ಮಾಡಿದ್ದಾರೆ. ಓಂ ಎಂಟರ್ಟೈನ್ಮೆಂಟ್ ಛಾಯಾಗ್ರಹಣ, ಸಂಕಲನ, ಡಬ್ಬಿಂಗ್, ಸಂಗೀತ ನೀಡಿದ್ದಾರೆ. ತಾರಾನಾಥ ಆಚಾರ್ಯ ಪಬ್ಲಿಸಿಟಿ ಡಿಸೈನ್ ಮಾಡಿದ್ದಾರೆ. ಮಂಗಳೂರಿನ ಯುವ ಪ್ರತಿಭೆಗಳಾದ ಗುರು ಪ್ರಸಾದ್ ಮುಳೂರು, ಅರ್ಜುನ್, ರಂಜಿತ್, ಶೋಭಾ, ಪುಷ್ಪ ಪೂಜಾರಿ, ರಕ್ಷಿತ್, ಚೈತ್ರ, ವಿಜಯ್, ಪ್ರಸಾದ್, ಚಿದಾನಂದ ಬೋರ್ಕಳ, ಕಾರ್ತಿಕ್, ಪ್ರವೀಣ್, ಚೈತ್ರ, ಕಿಟ್ಟಿ, ಪವಿತ್ರ, ಸಂತೋಷ್, ವಸಂತ್, ತಿಮ್ಮ ರೆಡ್ಡಿ, ಉದಯಾನಂದ, ಶ್ರವಣ್ ಮೊದಲಾದವರು ಮೊದಲ ಬಾರಿಗೆ ತೆರೆಯಲ್ಲಿ ನಟಿಸಿದ್ದಾರೆ. ಚಿತ್ರವು ಪ್ರತಿದಿನ ಬೆಳಗ್ಗೆ 10 ಗಂಟೆಗೆ ಭಾರತ್ ಮಾಲ್ ನಲ್ಲಿ ಪ್ರದರ್ಶನ ಕಾಣಲಿದೆ.





